ಈ ಓಣಿಗಳು

ಹೇಗೆ ಸುಮ್ಮನಿರಲಿ ತಂದೇ! ಉಸಿರಾಡದೆ ಉಸಿರದೆ, ಮಾತಾಡದೆ ಆಡದೆ ಸಾವಿರಾರು ವರ್ಷಗಳು ಆಳುತ್ತಾ ಬಂದ ದೇವರುಗಳು ಕೋಟ್ಯಾವಧಿ ಮಂದಿಗಳ ಬಡವಾಗಿಸಿರುವುದ ಕಂಡು ಹೇಗೆ ಸುಮ್ಮನಿರಲಿ ತಂದೆ? ಈ ಓಣಿ ಗೂಡುಗಳಲ್ಲಿ ನೆಲಕಚ್ಚಿದೊಡಲುಗಳು, ಗಂಟಲು ಕಚ್ಚಿದ...

ಉಳಿಸಿರೋ

ಆಯ್ದು ತಿನ್ನುವ ಕೋಳಿಗಳ ಕಾಲು ಕುತ್ತಿಗೆಗಳು ಯಾವಾಗ ಮುರಿದಾವು ಎಂದು ಹೇಳಲಾಸಲ್ಲ ಯಾವ ಹಣ ರಣಹದ್ದುಗಳ ಬಾಯಿಗೆ ನಮ್ಮ ಹೀಚು ಹೂಮೊಗ್ಗುಗಳು ಸಿಕ್ಕಾವು ಹೇಳಲಾಸಲ್ಲ ರಕ್ಕಸ ಬೀದಿಗಳಲ್ಲಿ ಯಮಲೋಕದ ಬಾಗಿಲುಗಳ ಮುಂದೆ ಸುಳಿದಾಟ ಆರಡಿ...

ಅಂಗಡಿ

ಎಲ್ಲಾ ಅಂಗಡಿ ಹರವಿಕೊಂಡಿದ್ದೇವೆ ಈ ಬಡಿವಾರ ಬಟ್ಟೆ, ಮೋಜಿನ ಕಟ್ಟೆ ಬೆಚ್ಚನ ಮನೆ-ವೆಚ್ಚದ ಬೇನೆ ಈ ಬೆಚ್ಚಿ ಬೀಳುವ ಧಿಮಾಕು ನಾಜೋಕು-ಷೋಕು ಹುಚ್ಚು ನಾಯಿಯ ಹಾಗೆ ತಿರುಗಾಟ ಕಾಮಾಲೆ ರೋಗದಂಥ ನೋಟ ನಾಲಿಗೆ ಪಾಚಿಗಟ್ಟಿ,...

ಪರಕೀಯ

ಮರಿಗಿಳಿಯನ್ನು ಕಾಡು ಬೆಕ್ಕು ಹೆದರಿಸುತ್ತಿದೆ ಬಳ್ಳಿ ಚಿಗುರಿನ ಸುತ್ತ ಕತ್ತಿ ಕತ್ತರಿಗಳು ಕುಣಿಯುತ್ತಿವೆ ಹೂ ಪಾದದ ಕೆಳಗೆ ಮುಳ್ಳು ಹರವುತ್ತಿವೆ ಆಶ್ರಮ ಶಾಂತಿಯಲ್ಲರಳಿದ ಕಿವಿಗಳ ಮೇಲೆ ಕೋಲಾಹಲದಲೆಯಪ್ಪಳಿಸುತ್ತಿವೆ ಮರಣದಾಚೆ ಇಣುಕಿ ಬಂದವನಿಗೆ ಉರಿಮಾರಿಯ ಮೆರವಣಿಗೆ...

ನಿನ್ನೊಳಗನಿಣುಕಿದವರೆಷ್ಟು ಮಂದಿ

ಅಮ್ಮಾ! ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ, ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ, ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ ಕುಸುರಿಗೆಲಸಗಳ ನೋಡಿ ಮರುಳಾಗಿ ಬಾಯ್ತೆರೆದು...

ಹೊಟ್ಟೆ ಪಾಡು

ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ ನಾಕಕ್ಸರಾ ಬಾಯಾಗಿಟಗಂಡು ನಾಕ ಪುಸ್ತಕಾ ತಲೆಯಾಗಿಟ್ಟುಗಂಡು ನಾಕ ಕಾಸ ಕೈಯಾಗಿಟಗಂಡು ಯಾಕ ಮೆರೀತಿಯಲೇ ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ ಸಮತಾ, ಸೋದರತಾ, ಗಾಂಧಿ ತಾತಾ ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ ಒದರಿ ಒದರೀ ಒಡಕು...

ನಮ್ಮ ಹೂವುಗಳು

ಹೂವರಳಿ ನಿಂತು ಕಾಯಾಗಲೆಂದು ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ್ಯ ಕಾಲ ಕಾಯಲು...

ಎಂಥ ಭಾರತ ೨

ಇಲ್ಲಿಯವರೆಗೆ ನಿರೋಧ-ನಿಷೇಧಗಳ ಹಿಡಿತ-ಬಿಗಿತಗಳ ‘ಋಣ’ ಮಾರ್ಗದಲ್ಲಿ ನಡೆದದ್ದಾಯಿತು ಹುಲಿಯ ಮೈ ಬೋಳಿಸಿ ಆಕಳ ಮಾಡುವ ಯತ್ನ ನಡೆಯಿತು ಆಟಗುಳಿ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು...

ಎಂಥ ಭಾರತ ೧

ಚರಿತ್ರೆ, ಪೂರ್ವ-ಚರಿತ್ರಯ ಅಚಾರಿತ್ರಿಕ ಕಂತೆಗಳನಿನ್ನು ಕಟ್ಟಿಡಿ ಕಾಣದುದರ ಕೈಕಾಲುಗಳಿಗೆ ಜೋತಾಡಿ ಕಾಗದ ಕರ್ರಗೆ ಮಾಡಿದ್ದ ತೆಗೆದಿಡಿ ಹಿಂದಿನದನ್ನೇ ಬೊಗಳಿಕೂಳ್ಳುವ ಬೋಳೆಯರ ಪರಿಯನ್ನಿನ್ನು ಬಿಡಿ ಆಕಾಶ ಮಲ್ಲಿಗೆ ಸಂಪಿಗೆಗಳ ಮೂಸಿದಿನ್ನು ಸಾಕು ಇಗೋ ನೋಡಿ ನಿಮ್ಮ...

ಸ್ವಾತಂತ್ರ್ಯ ಬಂದಿದೆ

ನಮಗೆ ಸ್ವಾತಂತ್ರ್ಯ ಬಂದಿದೆ ಸ್ವಾಮೀ ನಮಗೆ ಸ್ವಾತಂತ್ರ್ಯ ಬಂದಿದೆ, ನಮ್ಮ ಹಡೆದ ತಂದೆ ತಾಯಿಗಳ ಕಾಲಿಂದೊದೆಯಲು ನಮ್ಮ ತಿದ್ದಿ ಬೆಳೆಸಿದ ಗುರು ಹಿರಿಯರನೂ ಅಲ್ಲಗಳೆಯಲು ಆಡಳಿತದಾಡುಂಬೊಲದಲ್ಲಿ ಬೇಲಿ ಎದ್ದು ಹೊಲ ಮೇಯಲು ಜನಸೇವಾ ಭವನಗಳಲ್ಲಿ...
cheap jordans|wholesale air max|wholesale jordans|wholesale jewelry|wholesale jerseys