ನನ್ನ ಪ್ರೀತಿಯವರನ್ನು ಹಿಂದಕೆ ಬಿಟ್ಟು ಸಾಹಸವನೊಂದ ಕೈಕೊಂಡು ನಡೆದೆ: ಕೊನೆಗಾಣಿಸುವ ಶಕ್ತಿಯ ಕೊಡು,- ಸಮುದ್ರನಾಥ! ತುಂಬಿದ್ದ ಸ್ನೇಹಸಾಗರದಲ್ಲಿ ಬಿಂದುಮಾತ್ರವಾಗಿದ್ದೆ ನಾನು: ಇಂದಿನ ನನ್ನ ಏಕಾಂತವಾಸವನು ದಿವ್ಯ ತುಂಬುರನಾದದಿಂದ ತುಂಬುವ ನಂಬುಗೆಯ ಕೊಡು, ಸಮುದ್ರನಾಥ! ನನ್ನೀ ಒಬ್ಬೊಂಟಿಗತನವನು ಎ೦ಟೆದೆಯ ಬಂ...

ನಾನು ವೃಕ್ಷಶಾಸ್ತ್ರದ ಎಂ.ಏ. ಪರೀಕ್ಷಗೆ ಓದಿತ್ತಿರುವ ದಿನಗಳಲ್ಲಿ ಮೈಲಾಪೂರದ ದೊಡ್ಡ ಬೀದಿಯಲ್ಲಿರುವ ಒಂದು ಮಹಡಿ ಮನೆಯಲ್ಲಿ ವಾಸವಾಗಿದ್ದೆ. ನನ್ನಂತಹ ಹತ್ತಾರು ಜನವಿದ್ಯಾರ್ಥಿಗಳು ನಮ್ಮ ದೇಶದವರು ಆ ಮಹಡಿ ಮನೆಯಲ್ಲೇ ಇರುತ್ತಿದ್ದರು. ನಾನು ಬಂದ ಮ...

ದೇವಿ ನಿನ್ನ ಬೇಡುವೆ ಕಾಯೊ ದೂರ ಮಾಡದೆ, ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ. ಸೂರ್ಯನಾಗಿ ಮೇಲೆ ಚಲಿಸಿ ಕತ್ತಲನ್ನು ಹರಿಸುವೆ, ಮೋಡವಾಗಿ ನೀರು ಸುರಿಸಿ ಲೋಕಕನ್ನ ಉಣಿಸುವೆ, ಪ್ರಾಣವಾಯುವಾಗಿ ಸುಳಿದು ಕಾಣದಂತೆ ಕಾಯುವೆ, ತಂದೆ ನಿನ್ನ ಕರುಣ...

ಒಂದು ಬ್ರಿಟಿಷ್ ಹಡಗಿನಲ್ಲಿ ಮೂನ್ನೂರು ಜನ ಪ್ರಯಾಣಿಸುತ್ತಿದ್ದರು. ಹಡಗು ನಡುದಾರಿಯಲ್ಲಿ ನಿಂತು ಬಿಟ್ಟಿತು. ಮುನ್ನೂರು ಜನರೂ ಕೆಳಕ್ಕೆ ಇಳಿದು ಪ್ರಾಣ ಕಳೆದುಕೊಂಡರು. ಅವರು ಯಾತಕ್ಕೆ ಇಳಿದಿದ್ದು ಅಂದರೆ ಆ ನಿಂತ ಹಡಗನ್ನು ಎಲ್ಲರೂ ಇಳಿದು ದಬ್ಬುವ...

ಮನ ಕತ್ತಲೆ, ತನು ಹಮ್ಮು, ನೆನಹು ಮರವೆ, ಇವರೊಳಗೆ ಇದ್ದುಗನವ ಕಂಡಿಹೆನೆಂಬ ಅಣ್ಣಗಳಿರಾ ನೀವು ಕೇಳೀರೋ, ಘನವಕಾಂಬುದಕ್ಕೆ ಮನವೆಂತಾಗಬೇಕೆಂದರೆ, ಅಕ್ಕಿಯ ತಳಿಸಿದಂತೆ, ಅಲ್ಲ ಸುಲಿದಂತೆ, ಕನ್ನಡಿಯ ನೋಡಿದಂತೆ, ಮನ ನಿರ್ಮಳವಾದಲ್ಲದೆ, ಘನವ ಕಾಣಬಾರದು ...

ಕಾದೇ ಕಾದೂ ಕಾದೇ ಕಾದೂ ಬೆಂಕಿಯೆ ಆಗೀನಿ ಒಳಹೊರಗೆ ಹತ್ಕೊಂಡು ಉರಿಯಾಕ ಹತ್ತೆಯ್ತೆ ಹೇಗೋ ಸಾಗೀನಿ ಬಾರೇ ಬಾರೇ ನೀರೇ ಬಾರೇ ಉರಿಯನು ನಂದಿಸು ಬಾ ಮನೆ ಹೊತ್ತಿ ಉರಿದರೆ ನಿಲ್ಲಲುಬಹುದು ಮನದುರಿಯನಾರಿಸು ಬಾ ಕರೆಯದೆ ಕೊರಗುತ ನರಕದಿ ಕೂಳೆಯುತ ಏಸೊಂದು ...

ಪ್ರಿಯ ಸಖಿ, ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತದಲ್ಲವೇ? ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ. ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು. ಮೃದುವಾಯಿತೆಂಬ ಖುಷಿ.  ಪುಟ್ಟ ಮಕ್ಕಳಿಗೆ ಮ...

ಅಂದ ನೀ ಬೊಗಸೆ ಕಣ್ಣೊಳಗ ಮಿಂಚುವ ‘ಹೊಂಗನಸು’ಗಳನ್ನು ಕಂಡಿದ್ದಿ ನಾ ಹಂಗ ನಾ ಹಿಂಗ ಅಂತ ಮೈ ಅಲ್ಲಾಡಿಸಿದ್ದಿ ಆದರ ಈಗ್ಯಾಕ ನಿನ್ನ ಬೊಗಸೆ ಕಣ್ಣು ಸಣ್ಣಾಗಿ ‘ಹೊಗೆ ನನಸಿನ’ ಕಣ್ಣೀರು ಉದುರ್‍ತಾ ಇವೆ ಶಶಿ ಯಾಕೆ! ಗಂಡ ಬಡ ಪ್ರಾಣಿ ಅಂತಾಽ ಅತ್ತೆ ದುಬ್...

೧ (ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ ಅವನ ಮೈಮೇಲೆ ಒಂದೆರಡು ಜ...

ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್ ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ ರಥವೂ ಇಲ್ಲ ಕುದುರೆಯೂ ಇಲ್ಲ ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ. ನಮ್ಮ ಚಂದಿರ ಅತ್ಯಂತ ಸರಳ ಸುಂದರ. ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....