ಹೊಸ ಮನೆಯ ಬೆದರುಗೊಂಬೆಗೆ ಯಾವಾಗಲೂ
ಬಿದಿರಿನ ಎಲುಬುಗೂಡು, ಬೈಹುಲ್ಲಿನ ಮಿದುಳು, ಹರಿದ
ಹಳೇ ದೊಗಲೆ ಶರ್ಟು.

ಒಂದೆಡೆಗೆ ವಾಲುತ್ತ ತೂಗುತ್ತಿರುವ ಸ್ಥಿತಿ.
ಒಡೆದ ಮಡಕೆಯ ತಲೆ.  ಕಣ್ಣುಗಳಿರಬೇಕಾದಲ್ಲಿ
ಬಿಳೀ ಸುಣ್ಣದ ಬೊಟ್ಟು.

ಕಣ್ಣಲ್ಲಿ ಕಣ್ಣಿಟ್ಟು
ನೋಡಿದರೆ, ಎಲ್ಲರೂ ಮಲಗಿರುವ ಸಮಯ
ಎದ್ದು ಇಡಿಯ ನಗರವನ್ನೆ ಎತ್ತಿಕೊಳ್ಳುವಷ್ಟು,

ಪುನಃ ಕಲ್ಪಿಸುವಷ್ಟು
ಸಿಟ್ಟು.  ಶ್ರೇಷ್ಠವಾದ ಕೃತಿಗಳನ್ನು ಎಲ್ಲರೂ
ಅವರವರ ಸ್ವರೂಪದಲ್ಲೆ ನಿರ್ಮಿಸಿದರು.
*****