ಮಳೆಯ ಮರುದಿನ
ಇರುವಗಳಿಗೆ ಜಾತ್ರೆಯೋ ಜಾತ್ರೆ
ಸತ್ತ ಹುಳುಗಳ ತೇರು
ಗೋಡೆಯ ಉದ್ದಗಲ
ಎಳೆದೂ ಎಳೆದೂ ಹರಕೆ ತೀರಿಸಿ
ಮರುದಿನ ಮಾಯವಾಗಿ ಬಿಡುತ್ತವೆ
*****