ಬಟ್ಟಬಯಲಲ್ಲಿ ಒಂದು ಮರ ಹುಟ್ಟಿತ್ತು.
ಅದಕ್ಕೆ ಸುತ್ತಲು ಬೇರು ಆವರಿಸಿತ್ತು.
ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು.
ಅಡಗಿದ ಬೇರನೆ ಸವರಿ,
ಶತಕೋಟಿ ಕೊನೆಯನೆ ಕಡಿದು,
ಮರ ಒಣಗಿತ್ತು. ಉಲುಹು ನಿಂದಿತ್ತು.
ಎಲೆ ಉದುರಿತ್ತು. ತರಗೆಲೆಯಾದ
ಶರಣರ ಚರಣವಿಡಿದು, ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****