ಒಬ್ಬ ವ್ಯಕ್ತಿ ಸನ್ಯಾಸಿಯ ಬಳಿಗೆ ಹೋಗಿ ಕೈಮುಗಿದು ನಿಂತ.
ಸನ್ಯಾಸಿ: “ಏನು ಬೇಕಪ್ಪ, ನನ್ನಿಂದಲೇನಾದರೂ ಸಹಾಯ ಆಗಬೇಕೆ?”
ವ್ಯಕ್ತಿ: “ಹೆಂಡತಿಯನ್ನು ಪಳಗಿಸುವುದು ಹೇಗೆ ಎಂದು ದಯಮಾಡಿ ತಿಳಿಸುವಿರಾ?” ಪ್ರಾರ್ಥಿಸಿದ.
ಸನ್ಯಾಸಿ: “ಹೆಂಡ್ರ ಪಳಗಿಸೋ ವಿದ್ಯೆ ನನಗೆ ಗೊತ್ತಿದ್ದರೆ ನಾನೇಕೆ ಸನ್ಯಾಸಿಯಾಗಿರುತ್ತಿದ್ದೆ? ನೀನೇ ಯೋಚಿಸು, ಅದು ಅಸಾಧ್ಯದ ಮಾತು!”
***