ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. “ಸೂರ್ಯ”,-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. “ಬಾ, ಶಬರಿ” ಎಂದ. ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳ...

ಮರ ಮರ ರಾಮ ರಾಮ ತರವೇಹಾರಿ ತರಕಾರಿ ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ. ಮುಖಕ್ಕೆ ಆಮ್ಲಜನಕದ ಕೋಶ ಹೊತ್ತ ಲಲನೆಯರು ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ ಕೋಶದ ಹುಡುಕಾಟದಲ್ಲಿ. ಭೂಮಿಮಗನ ಬೆವರಹನಿ ಸುಡು ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ ಜೀರ್...

ದೈವ ದೇವರು ಸ್ವರ್ಗ ನರಕ ಎಲ್ಲವೂ ಕಟ್ಟುಕತೆ ಆರಂಭದಿಂದ ಕೊನೆಯ ತೀರ್ಪಿನ ತನಕ ಎಂದೇಕೆ ಎಲ್ಲ ತಿಳಿದವನಂತೆ ತಿಳಿಯದವರ ಬೆಪ್ಪಾಗಿಸುವೆ ? ಮಾಡದಿದ್ದರೆ ಬೇಡ ನಮ್ಮ ನಜರಿನಲಿ ನಿನ್ನ ನಮಾಜು ನಿನಗೆ ನಿನ್ನದೇ ಆವಾಜು ಕೇಳುವುದು ಖುಷಿಯಾದರೆ ಎಬ್ಬಿಸು ಸ್...

ಭಾಗ -೧ ಆತನ ಕೃತಿಗಳು ಆತನ ಖಾಸಗಿ ಬದುಕನ್ನು ಪ್ರತಿನಿಧಿಸಿದ್ದವು. ಆತನ ಅಸ್ತವ್ಯಸ್ತ ಆದರೆ ರಮ್ಯ ರಮಣೀಯ ಬದುಕಿನ ಶೈಲಿ ಆತನ ಕೃತಿಗಳನ್ನು ಶ್ರೀಮಂತಗೊಳಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಅಮರಗೊಳಿಸಿತು. ಆತನೇ ಇಪ್ಪತ್ತನೇ ಶತಮಾನದ ಮೇರು ಸಾಹಿತಿ ಡೆವ...

ನನಗೆ ಗೊತ್ತು, ಈ ದೊಡ್ಡ ಕತೆ: ನಾನು ನೆಪೋಲಿಯನ್, ನಾನು ಏಸು ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ, ಸತ್ಯದ ಕಿಡಿಹೊತ್ತಿಸುತ್ತ ಬೇಗೆಯಲ್ಲಿ ...

ಕಂದ ಬಾಬಾ ನಂದ ಬಾಬಾ ಪುಟ್ಟ ಗಿಣಿಮರಿ ಸುಂದರಾ ಓಡಿ ಬಾಬಾ ಕೈಯ ತಾತಾ ಆತ್ಮಗುಬ್ಬಿಯ ಚಂದಿರಾ ಕಲ್ಲುಸಕ್ಕರೆ ಮೆಲ್ಲುತಿರುವೆನು ಕುಂಟ ಕಳ್ಳನೆ ಕಂದನೆ ಎನ್ನ ಸೀರಿಯ ನಿರಿಗೆ ಮರೆಯಲಿ ಮುಸುಡಿ ಮುಚ್ಚುವ ತುಂಟನೆ ಎನ್ನ ಬಯಕೆಯ ನೂರು ಪಕಳಿಯ ಬಿಚ್ಚಿ ನಿನ...

ಕಮಲಗಣ್ಣಿನಿಂದ ಬಾನ ನೋಡುವ ಕೆರೆ ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ ಚೌಕ ಚೌಕ ತೇಪೆ ಹೊಲಿದ ಪಗಡೆಗದ್ದೆ ಹಸಿರ ಛತ್...

ಮೌನ ಕದಡಿದೆ ಮಾತು ಹೊರಳಿದೆ ಎತ್ತಲೆತ್ತ ನೋಡುತಿರುವೆ ಗೆಳತಿ || ಇತ್ತ ನನ್ನತ್ತ ನೋಡಬಾರದೆ ಒಮ್ಮೆ ||ಽಽಽ ಲಜ್ಜೆ ಏತಕೋ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಕರಗಿದೆ ಎನ್ನ ಮನದರಸಿ ನೀನಲ್ಲವೆ ಗೆಳತಿ|| ಇತ್ತ ನನ್ನತ್ತ ನೋಡಬಾರದೆ ಒಮ್ಮೆ ||ಽಽಽ ಕಾಡುವೆ...

ಚಿಕ್ಕಂದಿನಿಂದಲೂ ನನಗೆ ಮುಖವಾಡಗಳೆಂದರೆ ಕುತೂಹಲ, ಭಯ ಮತ್ತು ಆಶ್ಚರ್ಯಕರ ಸಂಗತಿಗಳಾಗಿದ್ದುವು. ನನ್ನ ಮೊದಲ ಕವನ ಸಂಕಲನದ ಹೆಸರು ‘ಮುಖವಾಡಗಳು’ ಎಂದೇ. ಈ ಸಂಕಲನದಲ್ಲಿ ಅದೇ ಹೆಸರಿನದೊಂದು ಕವಿತೆಯಿದೆ. ಮಣ್ಣಿನ ಮುಖಗಳಿವೆ ಕಬ್ಬಿಣದ ಮುಖಗಳಿವೆ-ಹೀಗ...

1...5152535455...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...