ನನಗೆ ಗೊತ್ತು, ಈ ದೊಡ್ಡ ಕತೆ:
ನಾನು ನೆಪೋಲಿಯನ್, ನಾನು ಏಸು
ಎಂದು ಕಲ್ಪಿಸಿಕೊಂಡ ಹುಚ್ಚ ಕರುಣಾಜನಕ ಜೀವಿಗಳ
ಉನ್ಮಾದ, ವಿಕೃತಿ. ಸುದೀರ್ಘ ಕೇಶರಾಶಿ ಬೆಳೆಸುತ್ತ
ಮಂಡೆ ಬೋಳಿಸುತ್ತ ಕನಸು ಗಪಗಪ ತಿನ್ನುತ್ತ,
ಸತ್ಯದ ಕಿಡಿಹೊತ್ತಿಸುತ್ತ ಬೇಗೆಯಲ್ಲಿ ಬಾಡುತ್ತ ಇರುವಾಗ
ಈ ಬಡರೈತ, ಸಾವಧಾನ
ಬೆವರು ಬಸಿದು ಶುದ್ಧನಾಗುತ್ತ,
ಒಳಿತು ಕೆಡುಕಿನ ಅರಿವಿನ ಮರದ
ದೊಡ್ಡ ದೊಡ್ಡ ಕೊಂಬೆ ನೆರಳಲ್ಲಿ ಉಳುತ್ತ
ಅಲ್ಲೊಂದು ಹಣ್ಣುಮಾಗುವುದು ಕಾಣುತ್ತ
ತಿನ್ನದೆ ಸುಮ್ಮನಿದ್ದಾನೆ.
*****
ಮೂಲ: ಆರ್ ಎಸ್ ಥಾಮಸ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)