ವಿಜ್ಞಾನ ಅವಿಷ್ಕಾರಗೊಂಡಂತೆ ನಿರುಪಯುಕ್ತ ವಸ್ತುಗಳಿಂದಲೂ ಕೂಡ ಹೊಸವಸ್ತುವನ್ನು ನಿರ್ಮಾಣ ಮಾಡುವ ಪ್ರಯೋಗಗಳು ನಡೆಯುತ್ತಲಿದೆ. ನಿರುಪಯುಕ್ತ ವಸ್ತುಗಳಾದ ಕಸ, ಕಡ್ಡಿ ಎಲೆ, ಸಿಪ್ಪೆಗಳಿಂದ ಅನೇಕ ವಸ್ತುಗಳನ್ನು ತಯಾರಿಸಲಾಗುತ್ತವೆ. ಇದರಂತೆ ವಿಜ್ಞಾನಿಗಳು ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿ ಅಮೂಲ್ಯ ವೈವಿಧ್ಯ ವಸ್ತು- ಗಳನ್ನು, ಉಪಯೋಗಗಳನ್ನು ಕಂಡು ಹಿಡಿದಿದ್ದಾರೆ. ಈ ಭತ್ತದ ಬೂದಿಯಿಂದ ಉತ್ಕೃಷ್ಠಗುಣಮಟ್ಟದ ಸಿಮೆಂಟ್ ತಯಾರಿಸಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಬಳಕೆಯಲ್ಲಿರುವ ಇಂತಹ ಭತ್ತದ ಸಿಪ್ಪೆಯ ಬೂದಿ ಆಧಾರಿತ ಸಿಮೆಂಟ್ ಸಾಧಾರಣ ಸಿಮೆಂಟಿಗಿಂತಲೂ ಶ್ರೇ‍ಷ್ಠಮಟ್ಟದ್ದೆಂದು ತಿಳಿದು ಬರಿದಿದೆ. ಭತ್ತದ ಸಿಪ್ಪೆಯ ಬೂದಿಯು ಕಾಂಕ್ರಿಟ್ ತಂತ್ರಜ್ಞಾನದಲ್ಲಿಯೇ ಹೊಸಶಾಖೆಯೊಂದನ್ನು ತೆರೆದಿದೆ ಮಾತ್ರವಲ್ಲ “ಬಹುಪಯೋಗಿ” ಎಂದು ಖಚಿತವಾಗುತ್ತಲಿದೆ. ಸಿಮೆಂಟಿನಂತಹ ಪುಡಿರೂಪದ ವಸ್ತು ಅಷ್ಟೇ ಅಲ್ಲದೇ ಹೊಸ ನಮೂನೆಯ ಇಟ್ಟಗೆಗಳ ತಯಾರಿಕೆಯಲ್ಲಿಯೂ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಲಾಗುತ್ತದೆ. ಕಾಂಕ್ರೀಟ್ ರಸ್ತೆನಿರ್ಮಾಣ ಕಾರ್ಯ- ದಲ್ಲಿಯೂ ಇಂತಹ ಭತ್ತದ ಸಿಪ್ಪೆಯ ಬೂದಿಯನ್ನು ಬಳಸಿಕೊಳ್ಳಬಹುದೆಂದು ಪ್ರಯೋಗಗಳಿಂದ ಕಂಡುಹಿಡಿಯ- ಲಾಗಿದೆ. ದಿನನಿತ್ಯ ಮನೆ ಮತ್ತು ಹೋಟೆಲ್‌ಗಳಲ್ಲಿ ಭತ್ತವನ್ನು ಸುಟ್ಟು ಬೂದಿಯಾದ ನಂತರ ನಿರುಪಯುಕ್ತವೆಂದು ಬಿಸಾಕುತ್ತಾರೆ. ಬಹುತೇಕ ಭತ್ತಕುಟ್ಟುವ ಯಂತ್ರಗಳು ಉಗುಳಿದ ಹೊಟ್ಟನ ರಾಶಿಯನ್ನು ತಿಪ್ಪೆಗೆಸೆಯುತ್ತಾರೆ. ಅಥವಾ ಬಿಸಾಕುತ್ತಾರೆ. ಅತ್ಯಂತ ಉಪಯುಕ್ತವಾಗುವ ಈ ಭತ್ತದ ಹೊಟ್ಟನಿಂದಾಗುವ ಉಪಯೋಗಗಳನ್ನು ತಿಳಿದು ಸದುಪಯೋಗಪಡಿಸಿಕೊಳ್ಳಬೇಕಿದೆ. ಅಥವಾ ಇಂತಹ ತಂತ್ರಜ್ಞಾನ ಇರುವಲ್ಲಿಗೆ ಭತ್ತದ ಹೊಟ್ಟನ ಲೋಡುಗಳನ್ನು ಸಾಗಾಣಿಕೆ ಮಾಡಿ ಅದರಿಂದಲೂ ಹಣಗಳಿಸಬಹುದು.
*****