ಮೌನ ಕದಡಿದೆ
ಮಾತು ಹೊರಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ

ಲಜ್ಜೆ ಏತಕೋ
ಮಜ್ಜಿಗೆಯೊಳಗಿನ
ಬೆಣ್ಣೆಯಂತೆ ಕರಗಿದೆ
ಎನ್ನ ಮನದರಸಿ ನೀನಲ್ಲವೆ ಗೆಳತಿ||
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಕಣ್ಣನೋಟದಲ್ಲೆ
ನಿನ್ನ ಮಾತು ಮೌನ ತಳೆದಿದೆ
ಮತ್ತೆ ಒಲವಿನಾ ಕರೆಗೆ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ||ಽಽಽ
ಕಾಡುವೆ ಏಕೆ ಗೆಳತಿ?

ಚಿತ್ತಾರ ಬರೆದ ಕುಂಚ
ನಿನ್ನ ರೂಪವ ನೋಡಿ
ನಾಚಿ ನನ್ನತ್ತ ಕಲೆಯ ಸಿರಿಯ ಹೊಗಳಿದೆ
ಎತ್ತಲೆತ್ತ ನೋಡುತಿರುವೆ ಗೆಳತಿ||

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ
ಕಾಡುವೆ ಏಕೆ ಗಳತಿ?||ಽಽಽ

ಇಬ್ಬನಿ ಹನಿಯಲ್ಲಿ
ಕೆಂದಾವರೆ ಮೊಗದಲ್ಲಿ
ಚುಮು ಚುಮು ಮಾಗಿಯ ತಂಪು
ನಿನ್ನ ಕೆಳೆಯಲ್ಲಿಽಽಽ
ಎಲ್ಲಿ ನೋಡುತಿರುವೆ ಗೆಳತಿ ||
ಇತ್ತ ನನ್ನತ್ತ
ನೋಡ ಬಾರದೆ ಒಮ್ಮೆ||ಽಽಽ

ಸಾಕು ಸಾಕಲೆ-
ಜಾಣೆ ಕೇಳೆ ನನ್ನಾಣೆ
ನಿನ್ನಲ್ಲಿಹುದೇ ನನ್ನ ಮನಸು
ಕಾಡುವೆ ಏಕೆ ಗೆಳತಿ?||ಽಽಽ

ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||
ಎಲ್ಲಿ ನೋಡುತಿರುವೆ ಗೆಳತಿ||
ಇಲ್ಲಿರುವೆ ನಾನೆಂತು ಕೇಳಲೆ
ಕರುಣೆ ತೋರೆಲೆ ಗೆಳತಿ
ಇತ್ತ ನನ್ನತ್ತ
ನೋಡಬಾರದೆ ಒಮ್ಮೆ||ಽಽಽ

ಸುರಿವ ಮಳೆಯ ನರ್‍ತನದಲಿ
ಗುಡುಗು ಸಿಡಿಲ ನಡುವೆ
ಮಿಂಚಾಗಿ ಬಂದೆ ನೀನು
ಮನದಾಳದ ಮಾತನರಿತು
ಮೆನಯ ಮಾಡಿ ನಿಂದೆ ನೀನು
ಕಾಡುವೆ ಏಕೆ? ಸುಮ್ಮನೆ ಇತ್ತ
ನನ್ನತ್ತ ನೋಡಬಾರದೆ ಒಮ್ಮೆ

ಯಾವ ಘಳಿಗೆಯೋ ತಿಳಿಯದು
ಬೆಳಕಾಗಿ ಬಂದೆ ನನ್ನ ರೂಪವೆ
ಮೈತಳೆದಿದೆ ನನ್ನಿ ಅಂಗಳ
ಕಾಡುವೆ ಏಕೆ ಸುಮ್ಮನೆ?
ಇತ್ತ ನನ್ನತ್ತ ನೋಡಬಾರದೆ ಒಮ್ಮೆ

ಗೆಳತಿ ನನ್ನ ಬಾಳಿನ ಒಡತಿ
ನಾನೆಂತು ಕೇಳಲೆ ಬಳಿಗೆ ಬಾರದೆ
ಕರುಣೆ ತೋರದೆ ಎಲ್ಲಿ ನೋಡುತಿರುವೆ
ನಾನಿರಲು ಇತ್ತ ನೀನಿರಲು ಅತ್ತ
ನಾನೆಂತು ಕೇಳಲೆ ಇತ್ತ ನನ್ನತ್ತ
ನೋಡಬಾರದೆ ಒಮ್ಮೆ ಗೆಳತಿ
ನನ್ನ ಒಡತಿ.
*****