ಮರ ಮರ ರಾಮ ರಾಮ
ತರವೇಹಾರಿ ತರಕಾರಿ
ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ.

ಮುಖಕ್ಕೆ ಆಮ್ಲಜನಕದ ಕೋಶ
ಹೊತ್ತ ಲಲನೆಯರು
ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ
ಕೋಶದ ಹುಡುಕಾಟದಲ್ಲಿ.

ಭೂಮಿಮಗನ ಬೆವರಹನಿ ಸುಡು
ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ
ಜೀರ್ಣಕ್ರಿಯೆಗೆ ಜಠರ ಟೋನಿಕ್ಕು

ರಸ್ತೆಯ ತುಂಬಾ ಊದಿಕೊಂಡ
ಹೊಟ್ಟೆ ಕರಳುಗಳ ಮಾಲೀಕರು
ಡ್ರೇಸ್ಸಿಂಗು, ಡಯಾಲಿಸಿಸ್ಸು ದುಗ್ಧ ಮನಸ್ಸು.

ಮನೆಗಳಿಲ್ಲ ಬರೀಯ ಅರಮನೆಗಳು
ಮೈತುಂಬಾ ಮುತ್ತುಗಳಂತೆ
ಮುಕುರಿಕೊಳ್ಳುವ ಸೊಳ್ಳೆ ಸರದಾರರು

ವಿಶ್ವಕ್ಕೆ ವಿಶ್ವವೇ ವಿಷಾನಿಲ ಕಂಪನಿಯ
ಸುಪರ್ದಿಯಲ್ಲಿ.
*****

Latest posts by ನಾಗರೇಖಾ ಗಾಂವಕರ (see all)