ಗ್ರಹಣ

ಅಂಗಳಕ್ಕಿಳಿದು ತಮ್ಮಟೆ ಬಾರಿಸಿ ಶಂಖ ಊದಿ ದೇವರ ಬಲ ಹೆಚ್ಚಲಿ ಹಾವಿನ ಬಲ ಕುಂದಲಿ ಹರಿಯೋ ಹರಿ ಎನ್ನುತ್ತಾ ಸುತ್ತಿದರು ಮುಳುಗಿ ಮಿಂದು ಉಂಡು ಮಲಗಿದರು ಅಂದಿಗೆ ಧನ್ಯತೆ ಫ್ಯಾಕ್ಟರಿಗಳ ಚಿಮಿಣಿಗಳ ದಟ್ಟ ನೆರಳುಗಳ...

ಈಡಿಪಸ್‌ಗೊಂದು ಪ್ರಶ್ನೆ

ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ ಹಾಕಿ ಅವಳೊಡೆಯನಾದೆ ಅವಳ ನಗ್ನತೆಯಲಿ ಸುಖವುಂಡು...

ಸೂಜಿ ಮತ್ತು ಅವಳು

ಎಲ್ಲಿ ಹೋದರೂ ಚಿನ್ನಾರಿ ಪೇಪರಿನಲಿ ಜೋಪಾನ ಮಾಡಿ ಎತ್ತೊಯ್ಯುತ್ತಾಳೆ ತನ್ನ ಪ್ರೀತಿಯ ಸೂಜಿಯನ್ನೂ! ಸೂಜಿಯೊಂದಿಗೇ ರೀಲುಗಟ್ಟಲೆ ಗಟ್ಟಿದಾರ ಹೊತ್ತು ಸಾಗಿ ಪಿಸುಗಿಹೋದ ಎಲ್ಲ ಎಲ್ಲವನ್ನೂ ಹೊಲಿಯುತ್ತಾಳೆ ಹರಕುಗಳು ಕಾಣದಂತೆ ಮುಚ್ಚುತ್ತಾಳೆ! ಹೋದ ಬಂದೆಡೆ ಎಲ್ಲಾ...

ವಿಮರ್ಶಕರು

ಪುಸ್ತಕಗಳನ್ನು ಬರೆದು ಪ್ರಕಟಿಸಿ ಇದ್ದುಬಿಟ್ಟರೆ ನಮ್ಮ ಪಾಡಿಗೆ ಏನೂ ಪ್ರಯೋಜನವಿಲ್ಲ, ನಾವೇ ಹುಡುಕಬೇಕು ಅವುಗಳ ಬಗ್ಗೆ ವಿಮರ್ಶೆ ಬರೆಯಬಲ್ಲವರನ್ನು ತೆರಬೇಕು ಅದಕ್ಕೆ ತಕ್ಕ ಬಾಡಿಗೆ. *****

ಪಾರಿಜಾತ

ಇನಿತೊಂದು ವಾಸನೆಯ ನಿನಗಾರು ಇತ್ತರು ? ನಿನ್ನ ಕಂಡವರೆಲ್ಲರ ಕೆಳೆಬೆಳೆಸಿ ಸೆಳೆಯಲು ನಿನ್ನಯಾ ಮುಡಿಬಯಸುತಿರಲಿನಿಯರು ಉನ್ನತದಲಿಹ ಮೃಡ ಬಿಡದೆ ಕೊಂಡೊಯ್ವನು ನಿನ್ನಯಾ ಗಮಗಮಿಸುವಾ ಸೊಗಸನೀವ- ಸುತ್ತು ತುಂಬುತಿಹ ಪರಿಮಳವು ಅನಿಲನಾ ಒಡನೆ ಸುಳಿಸುಳಿದು ಬರುವಾಗ...

ವಧುವಿನಂತೆ ಕಾದಿದೆ

ವಧುವಿನಂತೆ ಕಾದಿದೆ ವರಣಮಾಲೆ ನೇದಿದೆ ನಿನ್ನ ವರಿಸಲೆಂದು ಲೋಕ ಕಾತರದಲಿ ಕಾದಿದೆ, ಬಾ ಬಾ ಹೊಸ ಕಾಲವೆ ಹೊಸ ಹಾಡಿಗೆ ತಾಳವೆ ಬಾಳ ಕುಣಿಸುವಂಥ ಗರವ ಬೀಳಿಸುವಾ ದಾಳವೆ! ಬಾ ಬಾ ಹೊಸವರ್ಷವೆ ವಧುಗೆ...

ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ ಅಲ್ಲಿ ಏನೆಲ್ಲ ಇದೆಯಂತೆ ಅದೊಂದು ಮಾಯಾ ಪೆಟ್ಟಿಗೆಯಂತೆ ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ ಸುಮ್ಮನೆ ಕನಸು ಕಾಣಬಾರದಂತೆ; ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ ವಿಚಿತ್ರವಲ್ಲದೇ ಮತ್ತಿನ್ನೇನು- ಕಣ್ಣಿಗೆ ಎಣ್ಣೆ ಹಾಕಿಕೊಂಡೇ ಕಿಟಕಿಯ...