ಎಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ! ಅಕ್ಕಿ, ಗೋಧಿ, ಸಕ್ಕರೆಗಳಲ್ಲೋ ಹೆಸರು, ಉದ್ದು, ಕಡಲೆಗಳಲ್ಲೋ ಒಗ್ಗರಣೆ, ಲಟ್ಟಣಿಕೆಗಳಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ ಟಿ.ವಿ. ಫ್ರಿಜ್ಜು ಸೋಫಾಗಳಲ್ಲೋ ಕರೆಂಟು ಗ್ಯಾಸು ಸೀಮೆಎಣ್ಣೆಗಳಲ್ಲೆಲ್ಲೋ ಕ...

ನೋಡಲ್ಲಿ ತಲೆಬುರುಡೆ ನೆಲದ ಮೇಲಲ್ಲಿ ! ಆಗಿಹುದು ಗೋಲ್ ಚಂಡು ಗೊಲ್ಲ ಬಾಲರಿಗೆಲ್ಲ. ಬೆಳೆದು ಬಾಳಿಹ ಅಸ್ತಿ ಅದೋ ನಾಯ ಬಾಯಲ್ಲಿ ! ಒಲವು ಗೆಲವಿನ ಬಾಳು ಮೂಕವಾಗಿಹುದಲ್ಲ ! ಓ ವೀರ ಕಾಣಿದೋ ಜೀವನಾಂತ್ಯವಿದೆಲ್ಲ ! ಆಗೋ ಆ ಗೋರಿ ಬರಿಯ ಸುಣ್ಣದ ಮಾರಿ !...

ಹದಿನಾಲ್ಕನೇ ಶತಮಾನದ ಉದ್ದಕ್ಕೂ ಬದಲಾವಣೆಯ ಗಾಳಿ ಇಂಗ್ಲೆಂಡಿನ ಪ್ರತಿ ಹಂತಗಳಲ್ಲೂ ಬೀಸತೊಡಗಿತ್ತು. ರಾಜಕೀಯ, ಸಾಮಾಜಿಕ, ಧಾರ್‍ಮಿಕ, ಹಾಗೂ ಸಾಹಿತ್ಯಿಕ ರಂಗಗಳಲ್ಲಿ ಅಭೂತವಾದ ಬದಲಾವಣೆಗಳು ಗೋಚರಿಸತೊಡಗಿದ್ದವು. ರಾಜಕೀಯ ಹಿನ್ನೆಲೆಯನ್ನು ಗಮನಿಸಿದರ...

ಆಕಾಶಮಾರ್ಗದಲ್ಲಿ ಗಾಂಧಿಹೊರಟಿದ್ದು ಕಂಡೆ ಇದು ಡಿಸೆಂಬರ ಚಳಿಗಾಲ ಬೆಚ್ಚಗೆ ಹೊದ್ದುಕೊಂಡು ನಡಿಬಾರ್‍ದಾ ಹುಚ್ಚಪ್ಪಾ ಎಂದೆ ಎಲ್ಲಿಯ ಚಳಿ ಎಲ್ಲಿಯ ಮಳೆ ಎಲ್ಲರೆದೆ ಹೊತ್ತಿ ಉರಿಯುವಾಗ ನನ್ನದೇನು ಬಿಡು….. ಎನೇನೋ ಗೊಣಗುತ್ತಾ ವಿಮಾನ ಹಿಂದಿಕ್ಕ...

ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ…. ರೂಪ…. ತೇಜರಾ...

ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...

ಮರಗಳೆಲೆಗಳ ನಡುವೆ ತೂರಿ, ಅಲೆಗಳ ಮೇಲೆ ಬೆಳ್ಳಿಯೆರಕವ ಹೊಯ್ದ ಚಂದಿರನ ಬೆಳಕಿನಲಿ ತೊರೆಯ ಹೃದಯವು ಅರಳಿ, ಚಿಮ್ಮಿ, ಕುಣಿಯುವಹಾಗೆ ಮನಸು ಕುಣಿಯುತಲಿಹುದು ನಿನ್ನ ನುಡಿ ನನಸಿನಲಿ ನಾ ಮುಂದೆ ಸಾಗುತಿರೆ! ಹಿಗ್ಗಿನಲಿ ಕುಣಿಯುತ್ತ, ನಿನ್ನ ಕಂಡೊಡನೆನ್ನ...

123...6

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...