Month: August 2017

#ಕವಿತೆ

ಬಯಲಾಟ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಈ ಹಾಡಾಹಗಲೇ ದೇಶರಂಗಮಂಚದಲ್ಲಿ ಬಟಾಬಯಲಾಟ ನೋಡಿರಣ್ಣಾ ಬರೀ ರಕ್ಕಸ ಪಾತ್ರಗಳಣ್ಣಾ ತಿರುಗಾ ಮುರುಗಾ ಅಡ್ಡಾತಿಡ್ಡೀ ಕುಣಿತವಣ್ಣಾ ಹಾಡಿಗೂ ಕುಣಿತಕ್ಕೂ ತಾಳಕ್ಕೂ ಸಂಗೀತಕ್ಕೂ ಮುಮ್ಮೇಳ ಹಿಮ್ಮೇಳಕ್ಕೂ ತಾಳಮೇಳವಿಲ್ಲ ಒಂದಾಟವಾಡಲು, ಅನೇಕ ರಸಪ್ರಸಂಗಗಳ ತೋರಿಸಲು ಫೋಷಣೆ-ಭಾಷಣ, ಆದವಣ್ಣಾ, ರಂಗದ ಮೇಲೆ ಪರ ಪರಸಂಗಗಳ ಬಣ್ಣ ಬದಲಿಸಿ ವೇಷ ಬದಲಿಸಿ ಆಡುವರಣ್ಣಾ, ಊಸರವಳ್ಳಿಗಳೂ ಇದನು ನೋಡಿ ನಾಚಿದವಣ್ಣಾ, ನಿಸ್ಸಹಾಯ ಪ್ರೇಕ್ಷಕರ […]

#ಹನಿಗವನ

ಕನ್ನಡ

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

‘ಕನ್ನಡದಲ್ಲೇ ಮಾತಾಡು’ ಎಂದೆ; ಅವ ಸಿಟ್ಟಿಗೆದ್ದು ‘ಕನ್ನಡಕ್ಕೆ ಕೊಂಬುಂಟೋ?’ ಅಂದ; ಕೊಂಬಿಲ್ಲದಿದ್ದರೇನಂತೆ? ಕಹಳೆ ಉಂಟಲ್ಲ ಅಂದೆ ಅವ ಸುಸ್ತಾದ! *****

#ವಿಜ್ಞಾನ

ನಮ್ಮ ಆರೋಗ್ಯದಲ್ಲಿ ವಿಟಮಿನ್ನುಗಳ ಪಾತ್ರವೇನು?

0

‘ಆರೋಗ್ಯವೇ ಭಾಗ್ಯ’ ಎಂಬ ನಾಣ್ನುಡಿಯನ್ನು ಯಾರೂ ಅಲ್ಲಗಳೆಯಲಾರರು.  ಈ ಭಾಗ್ಯವು ಬಹುಮಟ್ಟಿಗೆ ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿದೆ ಎಂಬುದು “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಮಾತಿನಲ್ಲಿ ಅಡಕವಾಗಿದೆ.  ಉಚಿತಾನುಚಿತಗಳನ್ನು ಅರಿತು ಸಕಾಲದಲ್ಲಿ ಸೇವಿಸುವ ಶುಚಿರುಚಿಯ ಆಹಾರವು ನಮ್ಮ ಆರೋಗ್ಯಪಾಲನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.  ಇದು ಸಾಮಾನ್ಯ ಅಭಿಪ್ರಾಯ ಮಾತ್ರವಲ್ಲದೇ ವೈದ್ಯಕೀಯ ಅಭಿಪ್ರಾಯವೂ ಹೌದು. […]

#ಹನಿಗವನ

ಮುಕ್ತಕ – ವಚನ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಮಲ್ಲಿಗೆ ಹೂ ಹೂಂ ಎನ್ನೆ ಮುಕ್ತಕ ತಾಯಿನುಡಿ ಪರಮ ಹಿತವಚನ ಮಕ್ಕಳ ನಗೆ ಹನಿಗವನ ಚುಟುಕ ನೀತಿ ನಿಯಮ ಚಿಂತಾಮಣಿ ಸೋಮೇಶ್ವರ ಶತಕ! *****

#ಕವಿತೆ

ಯಾವ ಸೌಭಾಗ್ಯ ಸಮ ಈ ಚೆಲುವಿಗೆ?

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಯಾವ ಸೌಭಾಗ್ಯ ಸಮ ಈ ಚಲುವಿಗೆ ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ? ಸಾಲು ಹಿಮಗಿರಿ ಇವಳ ಹೆಮ್ಮೆಯ ಮುಡಿ ಸಾಗರವೆ ಬಿದ್ದಿಹುದು ಕಾಲಿನ ಅಡಿ, ಹಣೆಯಲ್ಲಿ ಮುಗಿಲ ಮುಂಗುರುಳ ದಾಳಿ ಉಸಿರಾಡುವಳು ಮರುಗ ಮಲ್ಲಿಗೆಯಲಿ. ಉದಯರವಿ ಹಣೆಗಿಟ್ಟ ಭಾಗ್ಯಬಿಂಬ ಆಗಸದ ಕಪ್ಪು ಜಡೆ ಬೆನ್ನ ತುಂಬ, ಸಾಲು ತೇಲುವ ಹಸಿರುಗಿಳಿಯ ಮಾಲೆ ಸರವಾಗಿ ಹೊಳಿಯುತಿದೆ […]

#ಕವಿತೆ

ಖಾಲಿ ಆಕಾಶದ ಮೌನ

0

ಬೆಳಕು ಹರಿದ ಮೇಲೆ ಸೂರ್ಯನಿಗೆ ಎದುರಾಗಿ ಒಬ್ಬೊಂಟಿ ’ವಾಕಿಂಗು’ ಪೂರ್ವದ ಹಳ್ಳಿಯೆಡೆಗೆ ಮಿರ ಮಿರ ಮಿಂಚುವದು ಗುಳಿಬಿದ್ದ ಕರಿಟಾರು ರಸ್ತೆ ಸೂರ್ಯಕಿರಣದಿ ತೊಯ್ದು ಬಿದ್ದು ಮೊಣಕಾಲು ಒಡೆದುಕೊಂಡ ಹುಡುಗ ರಸ್ತೆ ಹಾಕಿದ್ದು ನಿನ್ನೆ ಮೊನ್ನೆ ಹಾದಿಯ ಇಬ್ಬದಿಗೆ ನಿಂತ ಲೈಟು ಕಂಬಗಳು ಎಲ್ಲಿಂದ ಎಲ್ಲಿಗೋ ಹರಿದ ತಂತಿಗಳು ಬೆಳಕು ಯಾರಿಗೆ? ಸುಳಿ ಕಡಿದ ನೆಡು ತೋಪು […]

#ಕವಿತೆ

ಬುದ್ಧಿ ಚಿತ್ತ ಹಮ್ಮುಗಳೇ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಬುದ್ಧಿ ಚಿತ್ತ ಹಮ್ಮುಗಳೇ, ವಿಷಯೇಂದ್ರಿಯ ಬಿಮ್ಮುಗಳೇ ನನ್ನ ಹೊತ್ತು ಗಾಳಿಯಲ್ಲಿ ಜಿಗಿದೋಡುವ ಗುಮ್ಮಗಳೇ! ಓಡಬೇಡಿ ಕೆಡವಬೇಡಿ ಅಶ್ವಗಳೇ ನನ್ನನು ಎಸೆಯಬಹುದೆ ಕೊರಕಲಲ್ಲಿ ರಥದಿ ಕುಳಿತ ದೊರೆಯನು? ಸಾವಧಾನ ಎಳೆದು ಸಾಗಿ ಹೊಣೆಯನರಿತು ರಥವನು ವಶವಾಗದೆ ಸವಿಯಬೇಕು ದಾರಿಬದಿಯ ಚೆಲುವನು ಪ್ರೀತಿಸಿಯೂ ಅಣ್ಣ ತಮ್ಮ ಹೆತ್ತು ಹೊತ್ತ ತಾಯಿಯ ಬಲಿಯಾಗದೆ ಅರಿಯಬೇಕು ಮಾಟಗಾತಿ ಮಾಯೆಯ ಎಂಥ ಲೋಕ, […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೫

0

ಮಳೆಯನ್ನು ದ್ವೇಷಿಸುತ್ತ ಕೊಡೆ ಹಿಡಿದು ನಡೆದವನಿಗೆ- ಕಾಮನಬಿಲ್ಲು ಎದುರಾಯಿತು! *****

#ಸಣ್ಣ ಕಥೆ

ಬಾಲ್ಬಸ್ವವ್ರು

0
ದಲಿತ-ಬಂಡಾಯ ಚಳವಳಿಯ ಕಾಲದಿಂದಲೇ, ಬರವಣಿಗೆಯನ್ನು ಆರಂಭಿಸಿರುವ ಇವರು, ಸಾಕಷ್ಟು ಬರವಣಿಗೆಯನ್ನು ವಿವಿಧ ಪ್ರಾಕಾರಗಳಲ್ಲಿ ಮಾಡಿರುವಂಥವರು.ಇವರ ಕಥೆಗಳು ಕುತೂಹಲಕಾರಿ ಹಾಘೂ ಅಭ್ಯಾಸಪೂರ್ಣ ಯೋಗ್ಯವಾಗಿವೆ.ಒಂದು ವಿಶಿಷ್ಟ ಬಗೆಯ ಪ್ರಯೋಗಗಳನ್ನು - ಭಾಷಿಕ ಪ್ರಯತ್ನಗಳನ್ನು ಮಾಡುವುದರಿಂದ ಇವರ ಕಥೆಯೊಳಗೆ ಒಂದು ಚೈತನ್ಯಶೀಲತೆ ಮತ್ತು ಸಾಂಸ್ಕೃತಿಕ ಬಿಕ್ಕಟುಗಳ ಅನಾವರಣಗೊಳಿಸುವ ಗಂಭಿರ ಪ್ರಯತ್ನವನ್ನು ಕಾಣಬಹುದು.
ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)

ಮುಂಗೋಳಿ ಕೂಗಿದ್ದೇ ತಡಾ… ಸಿವಚಾಮ್ಗಿಳು ದಿಡಿಗನೆದ್ದ್ರು, ಯಿಡೀ ರಾತ್ರೆಲ್ಲ ಕೆಟ್ಕೆಟ್… ಕನಸ್ಗುಳು ಬಿದ್ದು… ಬಿದ್ದೂ… ನಿದ್ದೆ ಕಟ್ಕಾಟ್ಟಾಗಿ, ಮೇಲಿಂದ್ಮೇಲೆ…  ಯಗ್ರಿ… ಯಗ್ರಿ… ಬಿದ್ರು.. ಕೇರಿ ವರ್ಗಿನ ದುರ್ಗಮ್ಮನ ಗುಡ್ಕಿಟ್ಗೆ, ತಲೆ ಕ್ವಟ್ಟು… ಕಣ್ಮುಚ್ಚಿದ್ದೂ… ಕೆಟ್ಕೆಟ್… ಕನಸ್ಗುಳೇ… ಥೂ! ಪಾಪಿ ಯೆಲ್ಲಿ ಮಲ್ಗಿದ್ರೇನು? ದೇವ್ರ ಬಳಿಯಿದ್ದ್ರೂ… ವಂದೇ… ಮಾಯ್ದ ಮಗ್ರ ಬಂದೆಂಗೇ…  ನಿದ್ರೆ ಬರ್ದೆ…  ವಿಲ್ವಿಲಿ, ವದ್ದಾಡ್ವಿದ್ದಾಡಿ… […]

#ಕವಿತೆ

ಜಯವಾಗಲಿ ಇಳೆಗೆಲ್ಲ ಜಯ

0

ಸ್ವತಂತ್ರ ಭಾರತದರುಣೋದಯದ ಮುಂಗಿರಣವದೋ ಮೂಡುತಿದೆ; ಶತಮಾನದ ಮೇಲಿನ ಕಡು ದಾಸ್ಯದ ಭಂಗಗೈದ ತಮವೋಡುತಿದೆ. ಸ್ವಾತಂತ್ರ್‍ಯದ ಹರಿಕಾರರು ಮಲಗಿದ ಜನರನೆಚ್ಚರಿಸ ಬಂದಿಹರು; ಚಾತಕದೊಲು ಬಾಯ್ ಬಿಡುತಿಹ ಜನಕೆ ಒಸಗೆ ಭರವಸೆಯ ತಂದಿಹರು. ಇನ್ನೂ ಮಲಗಿರಲೇನು ಚೆಂದ? ಮೈ ಜಡತೆಯ ಕೊಡಹುತ ಎದ್ದೇಳಿ; ತನ್ನ ಪಾಲಿಗಿಹ ನಾಡಿನ ಸೇವೆಯ ಭಾಗವ ಸಲಿಸುವ ಮನ ತಾಳಿ. ಯಾರೋ ಬಿಡುಗಡೆ ನೀಡುವರೆಂದು […]