ಪ್ರಿಯ ಸಖಿ, ನೀನು ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯವನ್ನು ನೋಡಿರಬಹುದು. ಎಲ್ಲ ದೇವಾಲಯಗಳಂತೆ ಅದೊಂದು ದೇವಾಲಯ ಅದರಲ್ಲೇನು ವಿಶೇಷ ಎಂದು ಕೊಳ್ಳುತ್ತೀದ್ದೀಯಾ? ಈ ದೇವಾಸ್ಥಾನದ ಅನಂತ ಪದ್ಮನಾಭಮೂರ್ತಿ ಶೇಷಶಯನವಾಗಿದ್ದು ಅದು ಹದಿನೆಂಟ...

ಅದೇ ಮೊದಲನೆಯ ಸಲ ಸೀರೆ ಉಟ್ಟು ಮಾಂಗಲ್ಯಕಟ್ಟಿಸಿಕೊಂಡ ಹುಡುಗಿ- ಮದುವೆ ಮುಗಿಸಿ ಬಿಟ್ಟುಹೊರಡುವ ತಂದೆತಾಯಿಯರ ಅಗಲಿಕೆಯ ನೋವಿಗೆ ಅರಿಯದೇ ಕಣ್ಣೀರು ತುಂಬಿದ್ದು ಬಿಕ್ಕುತ್ತ ಸೆರಗಂಚಿನಿಂದ ಕಣ್ಣೊರಸಿಕೊಳ್ಳುವ ಮದುವಣಗಿತ್ತಿ- ಕಂಪ್ಯೂಟರ್ ಮೇಲೆ ಕೈಚಳ...

ನಾವೇನು ಮಾಡೋಕಾಗತ್ತೆ ಎಂದರೆ ಕೆಲಸ ಹೇಗೆ ಗಿಟ್ಟಿಸಿಕೊಂಡಿರಿ? ಮನೆ ಹೇಗೆ ಕಟ್ಟಿಸಿಕೊಂಡಿರಿ? ಮಕ್ಕಳನ್ನು ಹೇಗೆ ಅಮೇರಿಕೆಗೆ ಕಳಿಸಿದಿರಿ? ಒಂದು ದಿನ ಸಮೀಪ ಭರ್‍ರೆಂದು ಧಾವಿಸಿಹೋದ ಕಾರು ನಮ್ಮಿಬ್ಬರ ಮೇಲೂ ರಾಡಿ ಎರಚಿದ್ದು ನೆನಪಿಲ್ಲವೆ? ನಂತರ ನೀ...

ಆಕಾಶದಲ್ಲಿ ಕಾಲು ಇಳಿಬಿಟ್ಟು ನೀರಲ್ಲಾಡಲು ಹೋದ ಸೂರ್ಯ ಜಾರಿ ಸಂಜೆ ಸಮುದ್ರದೊಳಕ್ಕೆ ಬಿದ್ದವನನ್ನು ಮೀನುಗಳೆಲ್ಲಾ ಸೇರಿ ಮೇಲಕ್ಕೆತ್ತಲು ಪಾಪ ಬೆಳಗಿನವರೆಗೂ ಕಷ್ಟಪಡಬೇಕಾಯಿತು. *****...

ಚುಮು ಚುಮು ಬೆಳಗು, ಅರೆ ಕತ್ತಲೆ ಅರೆ ಬೆಳಕು. ಹಕ್ಕಿಗಳ ಚಿಲಿಪಿಲಿ ಸ್ವರ. ಇಂತಹ ಮುಂಜಾವುಗಳೆಂದರೆ ಅತ್ಯಂತ ಪ್ರಿಯವಾದದ್ದು ನೀಲಾಗೆ. ಎಲ್ಲರೂ ಮಲಗಿದ್ದರೂ ತಾನೊಬ್ಬಳೇ ಎದ್ದು ಮನೆಯ ಮುಂದೆ ದಿನಕ್ಕೊಂದು ರಂಗೋಲಿ ಇರಿಸಿ, ಅದನ್ನೊಮ್ಮೆ ಕಣ್ತುಂಬಿಕೊ...

ಏನೋ ನರಸಿಂಹಣ್ಣ ಏನೋ ಮರಿ ಭೀಮಣ್ಣ ಯಾಕೆ ಹೀಗೆ ಅಳುತೀಯೋ ಹೇಳೋ ನಮ್ಮನೆ ಕಾಮಣ್ಣ ಅರಳೀ ಚಿಗುರಿನ ಎಳೆಮುಖವು ಕೆರಳಿ ಕೆಂಪಾಗಿದೆಯಲ್ಲೋ ಕುಲು ಕುಲು ಗುಲು ಗುಲು ನಗೆದನಿಯು ಬಿರುಮಳೆ ಸಿಡಿಲಾಗಿದೆಯಲ್ಲೋ! ಬಿಳಿಮೊಲದಂಥ ಎಳೆಕಂದ ಹುಲಿಮರಿಯಂತೆ ಆಡ್ತೀಯ,...

ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ....

ಚರಿತ್ರೆ, ಪೂರ್ವ-ಚರಿತ್ರಯ ಅಚಾರಿತ್ರಿಕ ಕಂತೆಗಳನಿನ್ನು ಕಟ್ಟಿಡಿ ಕಾಣದುದರ ಕೈಕಾಲುಗಳಿಗೆ ಜೋತಾಡಿ ಕಾಗದ ಕರ್ರಗೆ ಮಾಡಿದ್ದ ತೆಗೆದಿಡಿ ಹಿಂದಿನದನ್ನೇ ಬೊಗಳಿಕೂಳ್ಳುವ ಬೋಳೆಯರ ಪರಿಯನ್ನಿನ್ನು ಬಿಡಿ ಆಕಾಶ ಮಲ್ಲಿಗೆ ಸಂಪಿಗೆಗಳ ಮೂಸಿದಿನ್ನು ಸಾಕು ಇ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....