ಎಂಥ ಭಾರತ ೧

ಚರಿತ್ರೆ, ಪೂರ್ವ-ಚರಿತ್ರಯ ಅಚಾರಿತ್ರಿಕ ಕಂತೆಗಳನಿನ್ನು ಕಟ್ಟಿಡಿ
ಕಾಣದುದರ ಕೈಕಾಲುಗಳಿಗೆ ಜೋತಾಡಿ ಕಾಗದ ಕರ್ರಗೆ ಮಾಡಿದ್ದ
ತೆಗೆದಿಡಿ
ಹಿಂದಿನದನ್ನೇ ಬೊಗಳಿಕೂಳ್ಳುವ ಬೋಳೆಯರ ಪರಿಯನ್ನಿನ್ನು ಬಿಡಿ
ಆಕಾಶ ಮಲ್ಲಿಗೆ ಸಂಪಿಗೆಗಳ ಮೂಸಿದಿನ್ನು ಸಾಕು

ಇಗೋ ನೋಡಿ ನಿಮ್ಮ ಮುಂದಿರುವುದು
ಪವಿತ್ರ-ಪುಣ್ಯಭೂಮಿ ಭಾರತವಲ್ಲ,
ಹಂದೆಗಳ ಹಡೆಯುವ, ದಾರಿದ್ರ್ಯ ದಳ್ಳುರಿಯ,
ಆತ್ಮಘಾತಕತನದ ಗಟಾರ ಮತಿಗಳ ಶುಷ್ಕನೆಲ

ನಾವೀಗ ಕೂಪ ಮಂಡೂಕಗಳು, ನಿಜವನರಿಯದ ನಿಯಮರಹಿತರು
ಹಲವು ಹಲ್ಕಟ್ತನಗಳ ಮುಚ್ಚಿ ಆದರ್ಶ ಹಾಡುವ ಮರುಳರು
ಸೋದರ ಸೋದರಿಯರೆಂದು ಹಾದರ ಮಾಡುವ ಲಂಪಟರು
ಪತಿವ್ರತೆಯರ ಮೇಕಪ್ಪಿನೊಳಗೆ ಮಿಡುಕುವ ಪತಿ-ತರು
ಸಂಪನ್ನ ರಾಮರೊಳಗೆ ಹುದುಗಿರುವ ರಾವಣರು

ಜಗವನ್ನೇ ಬೆಳಗಿದ ವಿಜ್ಞಾನ ರವಿಕಿರಣಗಳು
ಈ ಕಾಡಿನೆಲೆಗಳನೂ ಮುಟ್ಟಿಲ್ಲ, ನೆಲಕಿಳಿಯುವುದು ಕೇಳಬೇಡಿ,
ಇಲ್ಲಿಯ ಕಾಗೆ ಗೂಗೆಗಳಿಗೆ ಹೊಸ ಸತ್ಯ ಬೋಧಿಸಿದರೆ
ಅವು ಕೂಗುವುದು ಮತ್ತದೇ ಕಾಕಾ ಗೂಗೂ,
ಇಲ್ಲಿಯ ನಾಯಿಗಳಿಗೆ ಹೊಸ ಶಾಸ್ತ್ರ ಕಲಿಸಿದರೆ
ಅವು ಒದರುವುದು ಮತ್ತದೇ ಬೌಬೌ
ಇಂಗ್ಲೀಷ್ ಮಾದರಿಯ ನಗೆ-ನಡೆ-ಉಡಿಗೆಗಳೊಳಗೆ
ಯಾವ ಬೆಳಕಿಗೂ ಮೈತೋರಿಸದ ಬಾವಿ ಇದು
ಯಾವ ಹೊಸ ಗಾಳಿಗೂ ಬಗ್ಗದ ಮೋಟು ಮರವಿದು
ಯಾವ ಹೊಸ ಬೀಜವೂ ನಾಟದ ಕಗ್ಗಲ್ಲಿದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿತ್ರದುರ್ಗಕ್ಕೂ, ಚಿತ್ರರಂಗಕ್ಕೂ ಬಿಡಿಸಲಾರದ ನಂಟು
Next post ಲಿಂಗಮ್ಮನ ವಚನಗಳು – ೮೭

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…