ಆಕಾಶದಲ್ಲಿ ಕಾಲು ಇಳಿಬಿಟ್ಟು ನೀರಲ್ಲಾಡಲು
ಹೋದ ಸೂರ್ಯ ಜಾರಿ ಸಂಜೆ ಸಮುದ್ರದೊಳಕ್ಕೆ
ಬಿದ್ದವನನ್ನು ಮೀನುಗಳೆಲ್ಲಾ ಸೇರಿ ಮೇಲಕ್ಕೆತ್ತಲು
ಪಾಪ ಬೆಳಗಿನವರೆಗೂ ಕಷ್ಟಪಡಬೇಕಾಯಿತು.
*****