ಮಣ್ಣಿನ ಮಡಿಕೆ ಕುಡಿಕೆ ಕಲಾಯಿ ಇಲ್ಲದೇ ಅಟ್ಟಕ್ಕೇರಿದ ಹಿತ್ತಾಳೆ ತಾಮ್ರದ ಪಾತ್ರೆ ಮುತ್ತಜ್ಜ ಅಜ್ಜ ಅಪ್ಪ ಮತ್ತಿನ್ಯಾರೋ ಮಲಗೆದ್ದ ತೊಟ್ಟಿಲು ಉಯ್ಯಾಲೆ ಭೂತಾಕಾರದ ಮಂಚ ಮೂಲೆಯಲಿ ತೂಗುವ ಕಂದೀಲು, ಮುಖ ಕಾಣದ ಕನ್ನಡಿ ಪ್ರಾಚ್ಯ ವಸ್ತು ಸಂಗ್ರಹದ ಸರಕ...

ಇದ್ದರು ಒಂದೇ ಇಲ್ಲದಿದ್ದರು ಒಂದೇ|| ಮುದಿ ತಂದೆ-ತಾಯಿ ಏಳಲು ಬಾರದೆ ಹಾಸಿಗೆ ಹಿಡಿದು ನರಳಾಡುತಿರಲು ಬಂದು ನೋಡದೆ ತಂದು ಉಣಿಸದೆ ದೂರವಾದ ಈ ಮಕ್ಕಳೆಲ್ಲರು || ಇದ್ದರು || ಮಕ್ಕಳಿಲ್ಲವೆಂದನೇಕ ದೇವರ ಹರಕೆ ಹೊತ್ತು ಪಡೆದವರಿಗೆ ಉಣಿಸಿ ಬೆಳೆಸಿ ದೊಡ...

ಯಾರದೀ ವಿಶಾಲತೋಟ ಕಾಡು ಮೇಡು? ಯಾರಿದರ ಮಾಲಿಕ? ಬೆಳೆಸಿಕೊಂಡಿದ್ದಾನೆ ಅಲ್ಲಲ್ಲಿ ಸೂರ್ಯ ಚಂದ್ರ ತಾರೆಯರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು ಗ್ರಹ ನಕ್ಷತ್ರಗಳಾ ಬೆಳೆ! ಆಗಾಗ ಬೆಳೆಸುವನು ಮತ್ತೆ ಕಾಲನ ಕಾದಾಟಕೆ ಮಿಂಚು ಮೋಡ ಧುಮಕೇತು ಗ್ರಹಗಳ...

ನಿರಾಭರಣ ಸುಂದರಿ ಎನ್ನಂತರಾಳದ ಗೀತಿಕೆ ಮಂಜರಿ | ಒಡವೆ ತೊಡವಲಂಕಾರವಿರದ ಸಮದರ್ಶಿ ಸರಳಭಿಸಾರಿಕೆ ರೂಪಿನೊನಪಿನ ಬಿಂಕ ಬೆಡಗನು ತೊರೆದ ಸಿಂಗರ ಭೂಮಿಕೆ | ಝಣ ಝಣ ಶ್ರೀ ಸದ್ದ ಬಯಸದ ದುಗ್ದ ಹಾಸ ಮೌನದೆ ಮಾನಿನಿ ಅಡ್ಡಗೋಡೆಯ ಕುಟ್ಟಿ ಕೆಡವಿಸೊ ತಿಂಗಳಂಗ...

ಯಾರ ಬಳಸಿ ನಿಂತಿರುವನೊ ನನ್ನ ಹೆಸರಿನಲ್ಲಿ ಅಳುತಿರುವನು ಸಿಲುಕಿ ಅವನು ಈ ಕೂಪದಲ್ಲಿ ಹಗಲಿರುಳೂ ಮನಸುರಿದು ಗೋಡೆಯೊಂದ ಸುತ್ತಲೂ ಕಟ್ಟುತಿರುವ ಚಕ್ರಬಂಧ ಮುಟ್ಟುತ್ತಿದೆ ಮುಗಿಲು ಗೋಡೆ ನಡುವೆ ತರೆಯುತಿರುವ ಕಾಳತಿಮಿರ ಕೂಪ ಮೆಲು ಮೆಲ್ಲನೆ ನುಂಗುತ್ತ...

ನೀನು ಬರಿ ನೋವ ಕೊಟ್ಟೆ, ಚಿಂತಿಸುವ ಭಾರ ಎನ್ನದೆ. ಈಗ ನಂಬಿಕೂಡುವ ಕಾಲ ಇಲ್ಲ, ಯಾಕೆಂದರೆ ದಬ್ಬಾಳಿಕೆ ನಡೆಯೋಲ್ಲ. ಗೊತ್ತು ನನ್ನ ಹಾಗೆ ವಿಚಾರಿಸುವರು ಬಹಳ ಮಂದಿ ಇದ್ದಾರೆ ಯಾರ ಹಂಗೂ ಇಲ್ಲದೇ. ನೀನು ಬರೀ ನೆನಪು ಬಟ್ಟೆ ಅದರಪಟ್ಟಿಗೆ ಗುದ್ದಾಡುತ್ತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....