ಸೌದಾಮಿನಿ

ನಿರಾಭರಣ ಸುಂದರಿ
ಎನ್ನಂತರಾಳದ ಗೀತಿಕೆ ಮಂಜರಿ |

ಒಡವೆ ತೊಡವಲಂಕಾರವಿರದ
ಸಮದರ್ಶಿ ಸರಳಭಿಸಾರಿಕೆ
ರೂಪಿನೊನಪಿನ ಬಿಂಕ ಬೆಡಗನು
ತೊರೆದ ಸಿಂಗರ ಭೂಮಿಕೆ |

ಝಣ ಝಣ ಶ್ರೀ ಸದ್ದ ಬಯಸದ
ದುಗ್ದ ಹಾಸ ಮೌನದೆ ಮಾನಿನಿ
ಅಡ್ಡಗೋಡೆಯ ಕುಟ್ಟಿ ಕೆಡವಿಸೊ
ತಿಂಗಳಂಗಳ ಸೌದಾಮಿನಿ |

ಅವಳ ದರುಶನ ಕವಿತೆ ಕಾರಣ
ದಿಟ್ಟ ದಿಟ್ಟಿಯ ಭಾವನಾ
ಹೆಮ್ಮೆ ಲಜ್ಜೆಯೊಡಲಾಳ ಹುಡಿನುಡಿ
ಪದ ಪಾದವರ್ಣದ ವರ್ಣನಾ |

ನಿನ್ನ ಪದತಲದಲ್ಲಿ ನನ್ನಯ
ಕೊರಳ ಕೊಳಲಿನ ಗಾನವು
ನನ್ನ ಜೀವನ ಪಥವೆ ನಿನ್ನಯ
ರಾಗಾನುರಾಗ ಸುಸ್ವರ ಸೇತುವು |

ಗುಡಿಸಲಂಗಳ ರಂಗವಲ್ಲಿಯ
ಅರಳು ಮಲ್ಲಿಗೆ ಮ್ಲಾನವು
ಸೂರು ಸೂರಲಿ ಸೂಸೋ ರಶ್ಮಿಯ
ಮುಗ್ದ ಚಂದ್ರಿಕೆ ಗೀತವು |
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರ ಬಳಸಿ ನಿಂತಿರುವೆನೊ
Next post ನೀಲಿ ಕಾಡು

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ವರ್ಗಿನೋರು

  ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…