ಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ|| ಮೊದಲಿಗೆ ಕಾಣುವುದು ಗುಡಿಶಿಖರವು ನಂತರವ ಆಗುವುದು ಗುರುದರ್ಶನವು ಜಾತಿ ಮತ ಪಂಥಗಳ ಭೇದವ ಅಳಿಸಿದಿ ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ. ಕನ್ನಡಾಂಬೆಯ ಮಡಿ...

ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ...

ಅವೀರ್ಭವಿಸಿದೆ ಮೂರ್ತ ಅಮೂರ್ತಗಳ ನಡುವಿನ ಸ್ವರೂಪ ಮುಂದಕ್ಕಿಡುವ ಹಾದಿ ಹಿಂದಕ್ಕೋಡುತಿದೆ ಅಲ್ಲೊಂದು ಕಡಲು ಮೇಲೊಂದು ಮುಗಿಲು ದಾಟಿ ನದಿ ತಟವ ಕಾಡು ಗಿರಿಯ ಹಾದು, ಮುಗಿಲಂಚನು ಮುಟ್ಟುವಾಗಿನ ಸಂಭ್ರಮ ಗೆಲುವ ಮೀಟಿ ಪಿಸು ಪಿಸು ಧ್ವನಿ ಎಲ್ಲಿ? ಎಲ್ಲ...

ಶತಶತಮಾನಗಳಿಂದ ನಿನಗ ‘ಅವಳು’ ಅರ್ಥವಾದದ್ದೆಷ್ಟು? ಬರೀ ಇಷ್ಟೇ ಇಷ್ಟು! ಸಾಕಪ್ಪ ಸಾಕು ನಿನ್ನೀ ಕಾಗಕ್ಕ-ಗುಬ್ಬಕ್ಕನ ಕಥೆ ‘ಅವಳ’ ಅಂಗಾಂಗ ವರ್ಣಿಸುತ್ತಾ ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ ಅಡ್ಡಹಾದಿಗೆಳೆವ ರಸಿಕತೆ! ಆ ಸಂಸ್ಕೃತ ಕವಿಗಳ ಅಪರಾವತಾ...

ಯಾರಿಹರು ಬನ್ನಿರೋ; ದೀಪವೊಂದನು ತನ್ನಿರೋ ಕಡಿಯಿತೊಂದೇನೋ ಈ ಕತ್ತಲಲ್ಲಿ ತಾಳಲಾರೆನು; ಎಲ್ಲಿ ಹೋಗಿರುವಿರೋ? ನಾ ಮಾಡಬಲ್ಲೆನೇನು ಕಾವಳಲ್ಲಿ ! ಅವ್ವ ಬರಲಿಲ್ಲ, ಅಕ್ಕ ಇಲ್ಲಿಲ್ಲ, ಮತ್ತಾರ ಸುಳಿವಿಲ್ಲ ನಮ್ಮಮ್ಮ ಹೋದವಳು ಬರಲೇ ಇಲ್ಲ ಯಾರು ಕಾಣುವದಿಲ...

ನೊರೆನೊರೆಯಾದ ಮೋಡಗಳ ಕ್ಷೀರಸಾಗರ ಥೇಟ್ ಕ್ಯಾಲಂಡರಿನ ಚಿತ್ರದಂತೆಯೇ ದೇವದಾನವರ ಕಡಲಮಂಥನ ಪನ್ನಗಶಯನ ವಿಲಾಸಿ ವಿಷ್ಣು ಕಾಲೊತ್ತುವ ಆಭರಣ ಪ್ರಿಯೆ ಲಕ್ಷ್ಮಿ- ನೋಡಲು ಸುಸ್ತಾಗಿ ಕಲಾಕಾರನನು ಬೈಯ್ದು ಹಿಂದೊರಗಿ ನಿದ್ರಾವಶ. ವಿಷವುಂಡ ನೀಲಕಂಠನ ತೇಲುಗಣ...

ಬನ್ನಿ ಕನಸುಗಳೆ ಬನ್ನಿ ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ | ಮಣ್ಣಿನಲಿ ದಿನಕಟ್ಟೋ ಮಣ್ಣಣುಗರನು ಸಂತೈಸ ಬನ್ನಿ ಮಣ್ಣಲ್ಲಿ ಮಣ್ಣಾಗೋ ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ | ದುಡಿ-ದುಡಿದು ದಣಿ-ದಣಿವ ತನುಮನವನೋಲೈಸಲು ಬನ್ನಿ ಸುಲಿ-ಸುಲಿದು ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....