ಬನ್ನಿ ಕನಸುಗಳೆ ಬನ್ನಿ
ಬಾಳ ಬುತ್ತಿಗೆ ಭರವಸೆಯ ಹೊತ್ತು ತನ್ನಿ |

ಮಣ್ಣಿನಲಿ ದಿನಕಟ್ಟೋ
ಮಣ್ಣಣುಗರನು ಸಂತೈಸ ಬನ್ನಿ
ಮಣ್ಣಲ್ಲಿ ಮಣ್ಣಾಗೋ
ಎಚ್ಚರ ತೊರದವರೆಬ್ಬಿಸಿ ಕರೆದು ತನ್ನಿ |

ದುಡಿ-ದುಡಿದು ದಣಿ-ದಣಿವ
ತನುಮನವನೋಲೈಸಲು ಬನ್ನಿ
ಸುಲಿ-ಸುಲಿದು ಕೂಡಿಡುವ
ಮನವ ಕರಗಿಸಿ ಮುದದಿ ಹಿಡಿದು ತನ್ನಿ

ಅಲೆದಲೆದು ಹಣ್ಣಾಗೋ
ಅಲೆಮಾರಿಯಾ ಕೈ ಹಿಡಿದು ಬನ್ನಿ
ಒಲಿದೊಲಿದು ನಗೆಬೀರೊ
ಬೆಸುಗೆ ಸೊಗಸನು ಮನದುಂಬಿ ಕರೆದು ತನ್ನಿ

ಉಸಿರ್‍ಹುಸಿರ ಹಸಿರ ಝರಿ
ತೊರೆ ಜಿನುಗ ಝೀಕಿಸ ಬನ್ನಿ
ಮರಳ್ನೆಲದ ಕೂಪದೊಳು
ಚಿಲುಮೆ ಚಿನ್ಮನ ಬಾಳ್ಚೆಲುವ ತನ್ನಿ

ತಂತ್ರಯುಗದತಂತ್ರಗಳ
ಭೀತಿ ದೂರವಿಡ ಲೋಡೋಡಿ ಬನ್ನಿ
ಶಾಂತ-ಶಮ-ಕ್ಷಮತೆಯ
ಬಾನ್ ಬೆಳಕ ಸ್ಪುರಿಸೋ ನಿಯತಿ ತನ್ನಿ.
*****

ಗಿರಿಜಾಪತಿ ಎಂ ಎನ್
Latest posts by ಗಿರಿಜಾಪತಿ ಎಂ ಎನ್ (see all)