ಎಷ್ಟು ವರ್ಣಿಸಲೋ ಗುರುವೇ ಈ ನಿನ್ನ ಮಹಿಮೆ ನುಡಿಯಲಾಗದು ತೋರಲಾಗದು ಈ ನಿನ್ನ ಗರಿಮೆ ನೀಲಾಂಬರದವರೆಗೆ ಪಸರಿಸಿದೆ ನೀನೀ ವಿಶಾಲ ವಿಶಾಲ ಗಗನದೆತ್ತರಕ್ಕೂ ಬೆಳೆದಿದೆ ಎತ್ತೆತ್ತ ನಿನ್ನ ಜಾಲ ಕೈ ಹಿಡಿದು ಎನ್ನ ನಡೆಸಲು ನಿ ಬರಲಾಗದೆ! ಭವಸಾಗರದಿಂದ ಮೇಲ...

ಕೊಯ್ದು ಮುಗೀದಷ್ಟು ಹೂವಿರಲಿ ಶಿವನೆ ಮುಡಿದು ಮುಗೀದಷ್ಟು ಮಾಲೆಗಳು ಉರಿದು ಮುಗೀದಷ್ಟು ಬೆಳಕಿರಲಿ ಶಿವನೆ ಮಿನುಗಿ ಮುಗೀದಷ್ಟು ತಾರೆಗಳು ಕೇಳಿ ಮುಗಿಯದಷ್ಟು ಕತೆಯಿರಲಿ ಶಿವನೆ ಹೇಳಿ ಮುಗಿಯದಷ್ಟು ಸುದ್ದಿಗಳು ಹಾಡಿ ಮುಗೀದಷ್ಟು ಹಾಡಿರಲಿ ಶಿವನೆ ಆಡ...

ಸಂದೆಗದ ಹರಿವಿನೊಳು ತತ್ವಗಳೆ ಹಿಮಫಲಕ ಹಾಯುವಾಯಾಸದೊಳು ಮನ ಗಳಿಗೆ ನಿಲ್ಲೆ ಆ ಸೋಂಕಿನೊಳೆ ಕರಗಿ ಮರಳಿ ಹೊಳೆಸೇರುವುವು ಚಿತ್ತವಾಳ್ವುದು ಮರಳಿ ಆ ಹರಿವಿನಲ್ಲೆ ಕರಣವಿರೆ ವಿಷಯಗಳು ಚಿತ್ತವಿರೆ ಚಿಂತೆಗಳು ಜೀವವಿರೆ ಜಗವೆಂಬ ದ್ವೈಧವೇ ಮೆರೆಯೆ ಆ ನಿಲವ...

ಬಿಸಿಲ ಸೂರ್‍ಯನ ಕಾವು ತಟ್ಟಿ ಕರುಳ ಬಳ್ಳಿಯ ಹೂವು ಬಾಡಿ ಶಂಕೆಯಿದ್ದರೆ ಶೋಧಿಸಿ ನೋಡಿರಿ ನನ್ನ ಮನೆ, ಮಾಡು, ಮೂಲೆ, ಗೂಡು ಬೇಕಿದ್ದರೆ ನನ್ನ ರಕ್ತದ ಕಣಕಣದಲ್ಲಿ ಕೋಟಿಕೋಟಿ ಜೀವಂತ ಸಾಕ್ಷಿಗಳಿವೆ. ಹೆಕ್ಕಿ ನೋಡಿರಿ ಮುಕ್ಕಾದರೂ ಸರಿಯೇ ಅಲ್ಲಿ ಪೂರ್‍...

೧  (ಹಾಳಾದ ರೈತನು ಹೊಲವನ್ನು ಕೋರಿಗೆ ಕೇಳುವನು.) ಪೇಳುವುದಾರಿಗೆ ಗೋಳನ್ನು! ಕೇಳುವ ಜನರನು ನಾ ಕಾಣೆ !! ತಿರೆಯೊಳು ಸಿರಿಯಂ ಬೆರೆತಿಹರು ಮಲೆತಿಹ ಮದಗಜದಂತಿಹರು ತುಳಿಯುತ ಒಕ್ಕಲ ಮಕ್ಕಳನು ಗಳಪುತ ಸೆಳೆಯುತ ಭೂಮಿಯನು ಒಕ್ಕಲ ಮಕ್ಕಳು ಹೆಕ್ಕಳದೆ ಕಳ...

ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ ತಾಪವ ಹೀರಿ ತಂಪನು ಕೊಡುವೆವು ಕಡಿಯ ಬೇಡಿಯಣ್ಣ ನಮ್ಮನು ಕಡಿಯ ಬೇಡಿರಣ್ಣ || ನಡೆಯುವ ದಾರಿಯಲಿ ನಿಮಗೆ ನೆರಳನು ನೀಡುವೆವು ಬಳಲೀ ಬರುವಂತ ಮಂದಿಗೆ ಗಾಳಿಯ ಬೀಸುವೆವು ಹಸಿದಾ ಉದರಕ್ಕೆ ರುಚಿರುಚಿ ಹಣ್ಣನು ಕ...

ಮೂಲ: ಟಿ ಎಸ್ ಎಲಿಯಟ್ ಪ್ರಭೂ೨ ರೋಮನ್ ಹ್ಯಾಸಿಂಥ್ ಹೂವು ಕುಂಡದಲ್ಲಿ ಅರಳಿವೆ ಚಳಿದಿನಗಳ ರವಿಬಿಂಬ ಹಿಮಗಿರಿಗಳ ಮೇಲೆ ತೆವಳಿ ತೆವಳಿ ಹತ್ತಿದೆ. ಪಟ್ಟು ಹಿಡಿದು ನಿಂತಿದೆ ಋತು ಗಟ್ಟಿ ಕಾಲನ್ನೂರಿ. ನನ್ನ ಬಾಳ ದೀಪ ಮುಂಗೈ ಮೇಲಿನ ಹಗುರು ಹಕ್ಕಿಗರಿಯ ...

ನೀನು ನಡೆಯುವ ದಾರಿ ನನ್ನದಿರಲೆಂದು ನಾ ಬೇಡುವೆನು ಅನುದಿನವು. ನಿನ್ನ ಹೆಜ್ಜೆಯ ಗುರುತು ನನ್ನ ಬಿಜ್ಜೆಯದಾಗಲೆಂಬ ಹರಕೆಯ ಹೊರತು ಮತ್ತಾವುದನ್ನು ತಿಳಿಯೆ. ಬಯಲಿನಾ ಕಾಡಿನಾ ಸುಳಿವಿನಲಿ ನೀನಿರುವ ಹೊಳವಿರಲಿ ಚಿದ್ಘನಾ! ನನ್ನ ಸಂಗಡಿಗ ನೀನೆಂಬ ಸಂಗತಿ...

ಪಂಚಪೀಠದ ಶಿವನ ಮಠದಲಿ ಬನ್ನಿ ಬನ್ನಿರಿ ಕುಣಿಯುವಾ ಹೆಜ್ಜೆ ಹೆಜ್ಜೆಗೆ ಗೆಜ್ಜೆ ಕುಣಿಸುತ ಯೋಗ ನರ್ತನ ಮಾಡುವಾ… ಶಿವಧೋಂ ಶಿವಧೋಂ ಶಿವಧೋಂಽಽ ಮಾವು ಮಲ್ಲಿಗೆ ಬಕುಲ ಸಂಪಿಗೆ ಚಂಗುಲಾಬಿಯ ತೂರುವಾ ಆತ್ಮಸಂಯಮ ಯೋಗ ಸ೦ಯಮ ಲಿಂಗ ಸತ್ಯವ ಸಾರುವಾ ನಾ...

1...5960616263...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...