ಕಡಿಯ ಬೇಡಿರಣ್ಣ ನಮ್ಮನು ಕಡಿಯ ಬೇಡಿರಣ್ಣ
ತಾಪವ ಹೀರಿ ತಂಪನು ಕೊಡುವೆವು
ಕಡಿಯ ಬೇಡಿಯಣ್ಣ ನಮ್ಮನು ಕಡಿಯ ಬೇಡಿರಣ್ಣ ||
ನಡೆಯುವ ದಾರಿಯಲಿ ನಿಮಗೆ ನೆರಳನು ನೀಡುವೆವು
ಬಳಲೀ ಬರುವಂತ ಮಂದಿಗೆ ಗಾಳಿಯ ಬೀಸುವೆವು
ಹಸಿದಾ ಉದರಕ್ಕೆ ರುಚಿರುಚಿ ಹಣ್ಣನು ಕೊಡುತಿಹೆವು
ಹೆಂಗಳೆಯರ ಮುಡಿಗೆ ಬಣ್ಣದ ಹೂಗಳ ತರುತಿಹೆವು
ಹಸಿರೇ ಉಸಿರೆಂಬ ಸತ್ಯ ಮರೆತ ಗಾವಿಲರೇ
ಕಡಿಯ ಬೇಡಿರಿಂದು ಕಡಿದು ಹಾಳಾಗದಿರೆಂದು
ತೋರಣ ಕಟ್ಟುವೆವು ನಾಡನು ಸುಂದರ ಮಾಡುವೆವು
ವಾಯುಮಾಲಿನ್ಯ ಹೀರಿ ನಿರ್ಮಲ ಮಾಡುವೆವು
ಗಿಳಿ ಕೋಗಿಲೆಗಳಿಗೆ ನಮ್ಮಲಿ ಆಶ್ರಯ ನೀಡುವೆವು
ಚಿಲಿಪಿಲಿ ಸಂಗೀತ ನಿಮಗೆ ಕೊಡಿಸಿ ತಣಿಸಿಹೆವು
ನಾವು ಮಾಡುತಿಹ ನೂರು ಉಪಕಾರವ ಮರೆತು
ಅಪಕಾರವ ಮಾಡಿ ಭುವಿಯ ಮಸಣವ ಮಾಡದಿರಿ
ನಿಮ್ಮ ಸಮಾಧಿ ಕಟ್ಟದಿರಿ !
*****