ಬಾನಂಗಣದಲ್ಲಿ ಮಲಗಿ ಉಸಿರೆಳೆಯುತ್ತಿದೆ ಹಗಲು. ರೋಗಿಯ ಸುತ್ತಮುತ್ತ ಮಿಕಿ ಮಿಕಿ ನೋಡುತ್ತ ತಲ್ಲಣಿಸಿ ಕಾಯುತ್ತಿವೆ ಕೆಂಪಗೆ ಹತ್ತಾರು ಪುಟ್ಟ ಮುಗಿಲು. ಬೆಳಗಿನ ಎಳೆಪಾಪ ಮಧ್ಯಾಹ್ನಕ್ಕೆ ಬೆಳೆದು, ಮಧ್ಯಾಹ್ನದ ಉರಿ ಪ್ರತಾಪ ಮುಸ್ತಂಜೆಗೆ ಕಳೆದು ಈಗ ಕ...

ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ....

ಆಕಾಶ ಭೂಮಿ ಮಹದ್ ಕಾವ್ಯ ಮರವೃಕ್ಷ ಸಕಲ ವೇದ ಗಿಡಬಳ್ಳಿ ಸರಳ ರಗಳೆ ಪೊದೆಕಳ್ಳಿ ಕಥೆ ಕಾದಂಬರಿ ನದಿನಾಲೆ ಪ್ರವಾಸ ಕಥನ ಸರೋವರ ಚಿಲುಮೆ ಭಾವಗೀತೆ ಸಾಗರ ಗ್ರಂಥಾಲಯ ಆಗರ ಯುಗಯುಗಕು ಮುಫ್ತಲಿ ಸಿಗುವ ಪಠ್ಯ ಪುಸ್ತಕಗಳಿವು ನಿಂತು ಓದು ಬಾ ಮಾನವ ಕುರುಡ ಬ...

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ ತೀಡಿ ಅಂತರಾಳದಿಂದ ನೆಲದಾ...

ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ – ಡಾಕ್ಟರ್‍ ಇಂಜಿನೀಯರ ಆಫೀಸರ್‍ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ...

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ...

ನಿಶ್ಯಬ್ದ ಸಂತೆ ಅಲ್ಲ, ಆಂತರ್ಯ ಜೀರುಂಡೆಗಳ ಸಾಲು. ಕೊಂಕು ನೋಟದ ಕಣ್ಣು ಬಾಲ್ಯಕ್ಕಿಲ್ಲ ಬರಿಗಾಲಲ್ಲಿ ಕೊಳೆಗದ್ದೆಯ ನಡಿಗೆ ಭತ್ತದ ಅರಿ ಮಾಡುವಾಗಿನ ಹುರುಪು ಮತ್ತದೋ ಗುಡ್ಡದ ಬಯಲಿನ ಸ್ಪಷ್ಟ ಲೇಖನ ದನದೊಂದಿಗೆ ಜಾಣೆಯರು ಮತ್ತೆ ಬರದು ಎಂಬುದಷ್ಟೇ ಚ...

ಢಣಢಣ ಗಂಟೆ ಬಾರಿಸಿತು ಎಲ್ಲರೂ ಸಾಲಾಗಿ ಕುಳಿತರು ಬಣ್ಣ ಬಣ್ಣದ ಕವಿತೆಗಳು ಒಂದೊಂದಾಗಿ ವೇದಿಕೆಗೆ ಬಂದವು. ಕೆಲವು ಕವಿತೆಗಳು ಹೂಗಳಂತೆ ಅರಳಿದರೆ ಮತ್ತೆ ಕೆಲವು ನದಿಗಳಂತೆ ಹರಿದವು. ಕೆಲವು ಕವಿತೆಗಳು ನಕ್ಷತ್ರಗಳಂತೆ ಮಿನುಗಿದರೆ ಮತ್ತೆ ಕೆಲವು ಉಲ್...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...