ಬೆಳಗುತ ಬಂದಿತು

ಬೆಳಗುತ ಬಂದಿತು ದೀವಿಗೆ
ಹರುಷವ ತಂದಿತು ಬಾಳಿಗೆ
ಕತ್ತಲನು ಓಡಿಸಿ ಮತ್ತೆ ಹಸನಾಗಿ
ಬೆಳಕಾಗಿ ಬಂದೇ ಬಂದಿತು ಬಾಳಿಗೆ ||

ಬದುಕಿನ ಹಾದಿಯಲಿ
ಸಂಬಂಧಗಳ
ನಗೆಬೀರಲು ಚಿನಕುರುಳಿ
ಹೂಬಾಣಗಳ ಹೂಡಿತು ದೀವಿಗೆ ||

ಅಂಬರದಲಿ ಅಪ್ಸರೆಯರ ಆಹ್ವಾನ
ಚುಕ್ಕಿ ಚಂದ್ರಮರ ಭಾಷಿತ ಬರೆಯಿತು
ರಂಗೋಲಿಗಳ ಸುಲಲಿತದೆಳೆಗಳಲಿ
ಹಾಲ್ಗಲ್ಲ ಕಂದಮ್ಮಗಳ ತುಂಟತನ ದೀವಿಗೆ ||

ವರುಷಕೊಮ್ಮೆ ಬರಲು
ನವೋಲ್ಲಾಸ ತರಲು ದೀವಿಗೆ
ಕೆಳೆಯ ಅನುಬಂಧ ನೀಡಲು
ಬೆಳಕಾಗಿ ಬಂದಿತು ಬಾಳಿಗೆ ||
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂಕು ಪಣಂಬೂರಿಗೆ
Next post ಹೊಣೆ

ಸಣ್ಣ ಕತೆ