
ಹಾಡೆಂದರೆ ಹಾಡಲೇನು ಬಾನು ಚುಕ್ಕಿಯ ಕರೆಯಲೇನು || ಮೌನ ರಾಗವ ಮೀಟಿ ಭಾವನುರಾಗ ಸೆರೆಯಲಿ || ಸುತ್ತ ಚಂದ್ರ ತಾರೆ ಮಿಂಚಿ ನನ್ನ ಮನದ ಭಾವ ಹೊಂಚಿ ನಸು ನಾಚಿ ಕಾಮನೆ ಚೆಲ್ಲಿ ಸೆರಗ ಹೊದ್ದಿದೆ ಶಿಲೆಯು ||ಮೌ|| ಕಡಲ ತೀರ ಅಲೆಯ ಮೇಲೆ ನನ್ನ ಧಾರೆ ಹರಿಗ...
ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****...
ಬೀಜ ಬಿತ್ತಿದ ಅಮ್ಮನ ಹಿತ್ತಲಲಿ ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ ಅರಳಿ ಘಮ್ಮೆಂದು ಸೂಸಿ ನೆಲತುಂಬ ಹರಡಿ ಹಾಸಿದ ಪಾರಿಜಾತ ಹೂರಾಶಿ. ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ ಮೂಡಿವೆ ಅವಳ ಕೈ ಬೆರಳ ಬಳೆಗಳ ಚಿಕ್ಕೀ ನಾದ ರೇಖೆಗಳು ಚಿತ್ತ ಪಟ ಪಾತರಗಿತ್ತಿ...
ಮೋಡ ಕವಿದ ಮನಸಿಗೆಲ್ಲ ಬಿಸಿ ಉಸಿರುಗಳ ಭರ ಸಿಡಿಲು ಸಿಡಿದಾಗ ಚಿಮ್ಮಿತ್ತು ಮಳೆ ಶಾಂತವಾಗಿತ್ತು ಪ್ರಕೃತಿ ಮತ್ತೆ ಚಿಗುರೊಡದಿತ್ತು ಒಡಲು. *****...
ಅಲ್ಲಿ ನೆತ್ತರಿನ ಸ್ನಾನ ಮಾಂಸದಂಗಡಿಯೇ ಪುಣ್ಯಸ್ಥಾನ ಕೈಯಲ್ಲಿ ಕೋವಿ ಕರದ ಆಭರಣ ವ್ಯತಿರಿಕ್ತ ವ್ಯಾಖ್ಯಾನ ಧರ್ಮಕ್ಕೆ ನೀಡುವರು ಕುಲಬಂಧು ಬಾಂಧವರ ಕೊಚ್ಚಿ ಕೆಡವಿಹರು ಅವರು ಬೀಜಾಸುರರೇ ಇಲ್ಲ ರಕ್ತ ಪಿಪಾಸುಗಳೇ ತಿಗಣಿ, ಸೊಳ್ಳೆ ಉಂಬಳಿಗಿಂತ ನೇಚ್ಯ ...













