ಹಾಡೆಂದರೆ ಹಾಡಲೇನು
ಬಾನು ಚುಕ್ಕಿಯ ಕರೆಯಲೇನು ||
ಮೌನ ರಾಗವ ಮೀಟಿ
ಭಾವನುರಾಗ ಸೆರೆಯಲಿ ||

ಸುತ್ತ ಚಂದ್ರ ತಾರೆ ಮಿಂಚಿ
ನನ್ನ ಮನದ ಭಾವ ಹೊಂಚಿ
ನಸು ನಾಚಿ ಕಾಮನೆ ಚೆಲ್ಲಿ
ಸೆರಗ ಹೊದ್ದಿದೆ ಶಿಲೆಯು ||ಮೌ||

ಕಡಲ ತೀರ ಅಲೆಯ ಮೇಲೆ
ನನ್ನ ಧಾರೆ ಹರಿಗೋಲಲೀಲೆ ||
ಲೀಲೆಯಂತೆ ಸಾಗುತಿದೆ ದೋಣಿ
ಸೆರೆಯಾದ ರಾಗವ ಹಾಡಿ ||ಮೌ||

ಹೃದಯ ವೀಣೆ ಮಿಡಿಯುತಿದೆ
ಬಯಕೆಗಳು ತುಡಿಯುತಿದೆ ||
ತುಟಿಯಂಚಿನ ಸುಮಬಾಲೆ
ಮೌನ ತಾಳಿದೆ ಬಾವನುರಾಗ ಸುಧೆಯಲಿ ||ಮೌ||

ನೂತನ ಬಾಳಿಗೆ ಚಿಗುರಿದೆ ಬಳ್ಳಿ
ಮರವು ಆಸರೆಯಾಗಿ ಹಿಗ್ಗಿದೆ ||
ಹೃದಯದಂಗಳದಲಿ ಹಕ್ಕಿಯಂತೆ
ಮರೆಮಾಚಿ ಮೌನರಾಗವ ಮೀಟಿದೆ ||ಮೌ||
*****

Latest posts by ಹಂಸಾ ಆರ್‍ (see all)