ಅರೆ ಕಳೆದಿದೆ ರಾತ್ರಿ

ಜಗವೆಲ್ಲವು ಕನಸಿನ ಮಡಿಲಲಿ
ಮೋಹದಿ ಮಲಗಿದೆ- ನಾನಿನ್ನೂ
ಕಣ್ಣೀರಿನ ಹನಿಗಳ ನಡಗಿಸಿ,
ಉಷೆಯ ಹಂಬಲಿಸಿ ಎದ್ದಿರಲು,
ಅರೆ ಕಳೆದಿದೆ ರಾತ್ರಿ!

ಈ ತೀರದ ದನಿಮರಳಿ ಬಂದು
ಮಾರ್ದನಿಯಿಡೆ, ನಿಶಿಯೆದೆ ಮೌನ
ಸಿಡಿದು ಚೂರು ಚೂರಾಗಲು, ಚಂದಿರ
ಮೋಡದ ಗೋರಿಯ ಪಡೆದಿರಲು,
ಅರೆ ಕಳೆದಿದೆ ರಾತ್ರಿ!

ಶಾಂತಿ ಮೌನಗಳ ಭೀಕರ ದನಿ
ಬೆದರಿ ಬೆಚ್ಚಿಸಿರೆ ಅರೆಗನಸ-
ಅದುರಿದೆ ಎದೆದನಿ- ನೆನಪಾಗಲು
ಅಳಿದೊಲವಿನ ನೆರಳಿನ ಅಡಿ
ಅರೆ ಕಳೆದಿದೆ ರಾತ್ರಿ!
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆವರ್ತನೆ
Next post ಸಹಿ

ಸಣ್ಣ ಕತೆ