‘ಈ ಕಾರು ಯಾರದ್ದು?’
ಕೇಳಿದ ತಿಮ್ಮ
ಯಜಮಾನ್ರನ್ನ

ಮಗ ಒಯ್ದಾಗ
ಅದು ಮಗಂದು
ಮಗಳು ಒಯ್ದಾಗ
ಅದು ಮಗಳದ್ದು

ಅರ್ಧಾಂಗಿ
ಕ್ಲಬ್ಬಿಗೆ ಒಯ್ದಾಗ
ಅದು ಅರ್ಧಾಂಗೀದು ಎಂದ

ಯಾವಾಗ
ನಿಮ್ದಾಗುತ್ತೆ ಯಜಮಾನ್ರೇ?
ಪುನಃ ಕೇಳಿದ ತಿಮ್ಮ

ಅದನ್ನು
ಗ್ಯಾರೇಜಿಗೆ ಒಯ್ದಾಗ
ಅದಕ್ಕೆ
ಪೆಟ್ರೋಲ್‌ ಇಲ್ಲಿದ್ದಾಗ
ಅದು!
ನಂದಾಗುತ್ತೆ ಎಂದ
*****