ಅಲ್ಲಿ ನೆತ್ತರಿನ ಸ್ನಾನ
ಮಾಂಸದಂಗಡಿಯೇ ಪುಣ್ಯಸ್ಥಾನ
ಕೈಯಲ್ಲಿ ಕೋವಿ ಕರದ ಆಭರಣ

ವ್ಯತಿರಿಕ್ತ ವ್ಯಾಖ್ಯಾನ
ಧರ್ಮಕ್ಕೆ ನೀಡುವರು
ಕುಲಬಂಧು ಬಾಂಧವರ
ಕೊಚ್ಚಿ ಕೆಡವಿಹರು
ಅವರು ಬೀಜಾಸುರರೇ
ಇಲ್ಲ ರಕ್ತ ಪಿಪಾಸುಗಳೇ
ತಿಗಣಿ, ಸೊಳ್ಳೆ ಉಂಬಳಿಗಿಂತ
ನೇಚ್ಯ ಆದೀಮರೇ

ತಾಯ್ಮೊಲೆಯ ಅಮೃತವ
ಸವಿದಿಲ್ಲ ಖಳರು
ಹರಿಸುತಿಹರೇನದಕೆ ರುಧಿರ ಧಾರೆ?
ನೂರರಂತೆರಡು ಸ್ನಾಯುಗಳ
ಆಕುಂಚಿಸಿ ಪಡೆದ ಮಗನ ಕೊಂದು
ಹೆತ್ತ ಹೊಟ್ಟೆಗೆ ಮಾಂಸ ಉಣಬಡಿಸಿ
ಉಸುರಿದರು ನೀ ಮಗನ ತಿಂದೆ
ಎಂಥಾ ಮಹಾ ತಾಯಿ ಎಂದೆ?
ಧರ್ಮಾಂಧ ರಕ್ಕಸರು
ಏರಿ ಬರುತಿಹರು
ಐ ಎಸ್ ಐ ಎಸ್ ಅಂತಕರು
ಜಗತ್ ವಿಧ್ವಂಷಕರು
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)