ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ? ಸಿಂಹದಂತೆ...

ಎಲ್ಲಿ ಅಡಗಿರುವೆ ಹೇಳೆ ಕೋಗಿಲೆ ನಿನ್ನ ದನಿಯು ಕೇಳಿ ಬರುತಿದೆ || ಯಾವ ರಾಗದ ಭಾವವೂ ಯಾವ ತಾಳದ ವೇಗವೂ ಯಾರ ಪ್ರೇಮದ ಪಲ್ಲವಿಯು ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ || ಎಷ್ಟು ದೂರವಿರುವೇ ನೀನು ಯಾವ ಮರದಲ್ಲಡಗಿರುವೇ ನಿನ್ನ ಪ್ರೇಮ ಪಲ್ಲವಿಗೆ ಚರಣಗಳ...

ಆರುವ ಮುನ್ನ ದೀಪವು ಹೊಳೆದಂತೆ ಮಾಡದಿರೆನ್ನ ತಂದೆ ನೀನು| ಸಮಯವಿರುವಾಗಲೆ ಸದಾಕಾಲ ಬೆಳಗಿಸೆನ್ನನು ನೀನು|| ಚಿಂತಿಸಿ ನಾನಾ ತರದಲಿ ಜಗದಿ ಎನನೂ ಮಾಡಲಾಗದ ನನ್ನ ಭಯವನು ಹೊಡೆದೋಡಿಸು ನೀನು| ನೀ ದಾರಿದೀಪವಾಗೆನಗೆ ಕೃಪೆಯನು ತೋರಿ ನನ್ನ ಕತ್ತಲೆ ಓಡಿಸ...

ಪೊರಕೆಯಿಂದ ಟಾಯಿಲೆಟ್ ಬ್ರಷ್‌ವರೆಗೂ – ಬಾಚಣಿಕೆಯಿಂದ ಟೂತ್‌ಬ್ರಷ್‌ವರೆಗೂ- ನಿಮ್ಮನ್ನೂ ನಿಮ್ಮ ಮನೆಯನ್ನೂ ಕ್ಲೀನ್ ಗೊಳಿಸಿದ ನಮ್ಮನ್ನೆಂದಾದರೂ ಕ್ಲೀನ್ ಆಗಿ ಇಟ್ಟಿದ್ದೀರಿಯೆ? ಹೇಳಿ ದೇವರಾಣೆ ಮಾಡಿ? *****...

ತುಂಬಿದ ಹೊಳೆ ಸುಡುವ ಬೆಂಕಿ ಮಿಂಚುವ ಕಣ್ಣು ಕತ್ತಿಯ ನಾಲಗೆ ಕುದಿಯುವ ರಕ್ತ ಮಣಿಯದ ತೋಳು ಚಿರತೆಯ ನಡೆ ಹದ್ದಿನ ನೋಟ ಒನಪು-ವಯ್ಯಾರ ಆರ್‍ಭಟ-ಆವೇಶ ಅಗಾಧ ಹಸಿವು ಅಚಲ ವಿಶ್ವಾಸ ಪುಟ್ಟ ಹೃದಯ ದೊಡ್ಡ ಆಶೆ. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...