ಆರುವ ಮುನ್ನ ದೀಪವು

ಆರುವ ಮುನ್ನ ದೀಪವು
ಹೊಳೆದಂತೆ ಮಾಡದಿರೆನ್ನ ತಂದೆ ನೀನು|
ಸಮಯವಿರುವಾಗಲೆ
ಸದಾಕಾಲ ಬೆಳಗಿಸೆನ್ನನು ನೀನು||

ಚಿಂತಿಸಿ ನಾನಾ ತರದಲಿ ಜಗದಿ
ಎನನೂ ಮಾಡಲಾಗದ ನನ್ನ
ಭಯವನು ಹೊಡೆದೋಡಿಸು ನೀನು|
ನೀ ದಾರಿದೀಪವಾಗೆನಗೆ ಕೃಪೆಯನು
ತೋರಿ ನನ್ನ ಕತ್ತಲೆ ಓಡಿಸು ನೀನು||

ಬದುಕಲಿ ಬೆರಳೆಣಿಕೆಯಷ್ಟು
ಜನ ಸಾದಕರಲಿ ನನ್ನನು ನೀ ಬೆರೆಸು|
ಕಾರಣ ಹುಡುಕಿ ಸಮಯಕೆ ಕಾಯದಂತೆನ್ನ
ಕಾರ್ಯೋನ್ಮುಖನಾಗಿಸು ನೀನು||

ಕಾಲನ ಧೂತರ ಕೈಯಲಿ ಸಿಕ್ಕಿಸಿ
ಕಳವಳಪಡಿಸದಿರೆನ್ನನು ನೀನು|
ನಾ ದೀನರಿಗೆ ನೆರವಾಗುವಂತೆನ್ನ
ಬಿಡದಲೆ ಬಳಸಿಕೊ ನೀನು|
ಕಬ್ಬಿನಲಿ ಸಿಹಿಯ ಸಂಪೂರ್ಣತೆಯಂತೆ
ಕರ್ಪೂರವು ಸಮರ್ಪಕವಾಗಿ ಬೆಳಗುವಂತೆ
ನನ್ನನು ಪರಿಪೂರ್ಣಗೊಳಿಸು ನೀನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಗೈ ಆಳತೆಯೆ ವಿಮಾನಗಳು!
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೯೮

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…