ಅಂಗೈ ಅಳತೆಯ ವಿಮಾನಗಳನ್ನು ಕಲ್ಪಿಸುವುದು ಅಸಾಧ್ಯ. ಆಟಿಕೆ ಸಾಮಾನಗಳಲ್ಲಿ ಇಂಥಹ ಮಾದರಿಯನ್ನು ಕಾಣಬಹುದಷ್ಟೇ. ಇದೆಲ್ಲ ವಿಜ್ಞಾನದ ಆವಿಷ್ಕಾರಗಳಿಂದ ಸಾಧ್ಯವಾಗುತ್ತಲಿದೆ. ಈ ವಿಮಾನಗಳಿಗೆ “ಮೈಕ್ರೋವೆಹಿಕಲ್ಸ್”(ಎಂ ಎ ವಿ) ಅಥವಾ “ಕಿರುವಾಯು ವಾಹನಗಳು” ಎಂದು ಹೆಸರಿಸಲಾಗಿದೆ. ದೊಡ್ಡಗಾತ್ರದ ವಿಮಾನಗಳಲ್ಲಿ ಯಾವ ಯಂತ್ರದ ಬಿಡಿಭಾಗಗಳು ಸಮುಚ್ಚಯಗೊಂಡಿರುತ್ತದೆಯೋ ಅದೆಲ್ಲಾ ಸಣ್ಣದಾಗಿ ಈ ಮೈಕ್ರೋ ವಿಮಾನದಲ್ಲಿದೆ. ಅಂಥದ್ದೇ ಯಂತ್ರ. ಪುಟಾಣಿ ವಿಡಿಯೋ ಕ್ಯಾಮರಾಗಳು ಎಲ್ಲವೂ ಇವುಗಳಲ್ಲಿ ಇರುತ್ತದೆ. ಕೇವಲ ೬ ಅಂಗುಲಗಳಷ್ಟು ಗಾತ್ರದ ಈ ವಾಯು ವಾಹನಗಳು ಅಗ್ಗವಾಗಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬರುತ್ತವೆ.

ಒಬ್ಬ ಸೈನಿಕನು ಇದನ್ನು ತನ್ನ ಹೆಗಲ ಚೀಲದ ಹಾಗೆ ಸಾಗಿಸಿಕೊಂಡು ಹೋಗಬಹುದು ಅದನ್ನು ಹೂರ ತೆಗೆದು ಹಾರಿಬಿಟ್ಟು ದೂರ ನಿಯಂತ್ರಣದಿಂದ ಇದನ್ನು ಗಮನಿಸಿಬಹುದು. ಗುಡ್ಡಬೆಟ್ಟಗಳಲ್ಲಿಯ ದುರ್ಗಮ ವಾತಾವರಣವನ್ನು, ಭೂಮಿಯಲ್ಲಿ ಅಡಗಿದ ಬಾಂಬುಗಳನ್ನು ಈ ಪುಟ್ಟ ವಿಮಾನ ಪತ್ತೆ ಹಚ್ಚುತ್ತದೆ. ರಾಸಾಯನಿಕ ಇಲ್ಲವೆ, ಜೈವಿಕ ಅಸ್ತ್ರಗಳ ಅಡಗು ಸ್ಥಾನಗಳನ್ನು ಸಹ ಇದು ಗುರುತಿಸುತ್ತದೆ.

ನಾಗರಿಕ ವಿಮಾನಯಾನಕ್ಕಾಗಿ ಇವುಗಳನ್ನು ಬಳಸಿದರೆ ಗಾಳಿಯ ಮಾಲಿನ್ಯವನ್ನು ಪರೀಕ್ಷಿಸಬಹುದು. ಬೆಂಕಿ ಹತ್ತಿದ ಕಟ್ಟಡಗಳನ್ನು ಪ್ರವೇಶಿಸಿ ಅಪಾಯಕ್ಕೊಳಗಾದವರನ್ನು ಗುರುತು ಹಚ್ಚಬಹುದು. ನಿರ್ಗಾವಣೆಗಾಗಿಯೂ ಇಂಥವುಗಳನ್ನು ಬಳಸಬಹುದು.

ಇವುಗಳ ವಿನ್ಯಾಸಗಳಲ್ಲಿ ಅನೇಕ ತೊಡಕುಗಳಿವೆ ಎಂದು ವಿನ್ಯಾಸಕರು ಹೇಳುತ್ತಾರೆ. ಸಾಮಾನ್ಯವಾಗಿ ಮಾಮೂಲ ವಿಮೂನಗಳ ರೆಕ್ಕೆಗಳು ಹಾರಾಟದಲ್ಲಿ ಒಂದೇ ಆಕಾರದಲ್ಲಿರುತ್ತವೆ. ಅದರ ಕಿರು ವಿಮಾನಗಳ ರೆಕ್ಕೆಗಳ ಆಕಾರವು ವೇಗಕ್ಕೆ ಬದಲಾಗುತ್ತವೆ. ಇಂಥಹ ಕಿರು ವಿಮಾನಗಳು ವಿಶ್ವದಲ್ಲೆಡೆ ಉಪಯೋಗಗೊಂಡರೆ ಅಸಂಖ್ಯಾತ ದುರಂತಗಳನ್ನು ತಡೆಯಬಹುದು. ಜೈ ಪುಟಾಣಿ ವಿಮಾನ.
*****