ಹೋದುದಲ್ಲಾ! ಎಲ್ಲಾ ಹೋದುದಲ್ಲಾ! ಹೋದುದೆಲ್ಲವು ಕಣ್ಣ ಹಿಂದೆ ಖೇದವಿನ್ನೆನಗುಳಿದುದೊಂದೆ ಹೇ ದಯಾನಿಧೆ! ಪ್ರೇಮದಿಂದೆ ಹಾದಿ ತೋರಿಸಿ ನಡಿಸು ಮುಂದೆ ಹೋದುದಲ್ಲಾ, ಎಲ್ಲಾ ಹೋದುದಲ್ಲಾ. ತೊಡೆಯ ತೊಟ್ಟಿಲೊಳೆನ್ನನಿಟ್ಟು, ಕುಡಿಸಿ ಮಮತೆಯ ಗುಣವ ನೆಟ್ಟು,...

ತಲೆಮಾರಿನಂತರವ ತಾಳದೆಲೆ ತಾನು ತಾನೆನುತ ತಲೆಗೊಂದು ಸೂರೆಳೆವ ಮನುಜ ತಾ ಸಹಬಾಳ್ವೆ ತೊರೆದೊಡಂ ಕೇಡಿಲ್ಲವಾದೊಡೆಲ್ಲ ಜೊತೆಯಾಗಿರ್‍ದೊಡದು ತಮ್ಮ ಹಿತವೆನುವ ಸಸ್ಯಗಳನೀ ಪರಿ ಬೇರ್ಪಡಿಸು ತಲದನು ತಬ್ಬಲಿ ಮಾಡಿರಲೆಲ್ಲ ಕೃಷಿ ಕೆಟ್ಟಿಹುದು – ವಿಜ್...

ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗು...

ಭಾವ ಚಿತ್ರಗಳನ್ನು ಹೊತ್ತ ಗೋಡೆ ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ. ಗೋಡೆಗಳು ಕಿಟಕಿಗಳು, ಬಾಗಿಲುಗಳು ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ. ಬಚ್ಚಲ ಮನ...

ಜಯ ಭಾರತ ನವ ಭಾರತ ಜಯ ಭಾರತವೆನ್ನಿ || ಜಯ ಜಯ ಘೋಷಣೆಯ ಮೊಳಗಿಸಿ ನವ ಚೇತನದೆಡೆಗೆ ನಡೆಯಿರಿ || ಜ || ವೀರ ಯೋಧರು ಬೆಳಗಿದ ಭೂಮಿ ಜನನಿಯ ಜೊಗುಳದ ಐಸಿರಿ ಎನ್ನಿರಿ || ಜ || ನವಋತುಗಳ ನವ ಭಾಷೆಯೆ | ನವ ಜೀವನದ ಜೀವನದಿಗಳ ತಾಣವೆನ್ನಿರಿ || ಜ || ದ...

ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ ನಡುವೆ ನಾನು ಅನಾಥ ನರಕವೇ ಗತಿ ನಾ ಜನ...

ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ ಮಧುರ ಕೌಶಲ ಮಾಯ...

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳು...

ಏಕೆ ಹುಟ್ಟಿಸಿದೆ ನನ್ನನು? ಎಂದು ಪ್ರಶ್ನೆಯ ಕೇಳದೆ ಇಲ್ಲಿ ಹುಟ್ಟಿಸಿ ನಿನ್ನಯ ಕರ್‍ಮವ ಕಳೆಯೆ ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು|| ಏಕೆ ನನಗೆ ಈ ಸ್ಥಿತಿಯ ನೀಡಿದೆ ಎನ್ನುವುದಕಿಂತ ಇದಕಿಂತ ಕೆಳಗಿನ ಪರಿಸ್ಥಿತಿಯ ಅವಲೋಕಿಸಿ, ಇದೇ ನನಗೆ ಉತ್ತಮವೆಂ...

ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ ಮಣ್ಣು ಕಾಯುತ್ತ ಕ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...