ಶೋಕ ಗೀತೆ

ಹೋದುದಲ್ಲಾ! ಎಲ್ಲಾ ಹೋದುದಲ್ಲಾ!

ಹೋದುದೆಲ್ಲವು ಕಣ್ಣ ಹಿಂದೆ
ಖೇದವಿನ್ನೆನಗುಳಿದುದೊಂದೆ
ಹೇ ದಯಾನಿಧೆ! ಪ್ರೇಮದಿಂದೆ
ಹಾದಿ ತೋರಿಸಿ ನಡಿಸು ಮುಂದೆ
ಹೋದುದಲ್ಲಾ, ಎಲ್ಲಾ ಹೋದುದಲ್ಲಾ.

ತೊಡೆಯ ತೊಟ್ಟಿಲೊಳೆನ್ನನಿಟ್ಟು,
ಕುಡಿಸಿ ಮಮತೆಯ ಗುಣವ ನೆಟ್ಟು,
ಬಿಡದೆ ವಿದ್ಯೆಯ ಬಾಯ್ಗೆಕೊಟ್ಟು
ನಡೆದನೆನ್ನನು ಮರುಗಬಿಟ್ಟು
ಹೋದನಲ್ಲಾ, ಅಪ್ಪ ಹೋದನಲ್ಲಾ.

ಆಟದಿಂದೆನ್ನೊಡನೆ ಬೆಳೆದು,
ಊಟಕೂಟದ ಪ್ರೇಮ ತಳೆದು,
ಕೋಟಲೆಯ ಸಂಸಾರ ಕಳೆದು
ದಾಟಿದನು ಮಮ ಹೃದಯ ಸೆಳೆದು
ಹೋದನಲ್ಲಾ, ತಮ್ಮ ಹೋದನಲ್ಲಾ.

ಮನದಿ ಕೃಷ್ಣತೆಯನ್ನು ಮುಚ್ಚಿ,
ಕನಕತನು ಸೌಂದರ್‍ಯ ಬಿಚ್ಚಿ
ಧನದ ಕಪಟ ಸ್ನೇಹ ಹಚ್ಚಿ
ಕೊನೆಗೆ ಮಿತ್ರ ಭುಜಂಗ ಕಚ್ಚಿ
ಹೋದನಲ್ಲಾ ಮಿತ್ರ ಹೋದನಲ್ಲಾ.

ಅಲೆಯ ಬಡಿತಕೆ ಜಾರ್‍ವ ಮಳಲೋಲ್
ಕೆಳಗಿಳಿವ ಹೊತ್ತರೆಯ ನೆಳಲೋಲ್
ತಳದ ತೂತಿನ ಗಡಿಗೆ ಜಲದೋಳ್
ತಿಳಿದು ತಿಳಿಯದೆ ನೂರಬುದದೋಲ್
ಹೋದುದಲ್ಲಾ, ಪ್ರಾಯ ಹೋದುದಲ್ಲಾ.

ತೋರದಂದದಿ ಸೇರಿ ತೋರುತ
ಭೂರಿ ಸುಖ ಸಂತಸವ ಕೋರುತ
ನೀರಿನೋಲ್ ಕೈಯಿಂದ ಜಾರುತ
ಹಾರಿ ಹೋದುದು ದುಃಖ ಕಾರುತ
ಹೋದುದಲ್ಲಾ, ದ್ರವ್ಯ ಹೋದುದಲ್ಲಾ.

ಅಕಟ! ಈ ಸಂಸಾರದೊಳಗೆ
ಸಕಲ ನಾಶಕೆ ಮೂರು ಗಳಿಗೆ
ಶಕಟ ನಂದದಿ ತಿರುಗಿ ಕೆಳಗೆ
ವಿಕಟ ಭಾರತನಾದೆನಿಳೆಗೆ

ಹೋದುದನು ನಾ ಮರುಗದಂದವ
ಗೈದು ಬಿಗಿ ವೈರಾಗ್ಯ ಬಂಧವ,
ಓ ದಯಾನಿಧೆ ಭಕ್ತಬಾಂಧವ
ಮೋದದಿಂದವತರಿಸಿ ಬಂದವ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಳವೆನುವಾ ತರುಲತೆಗಳನೊಂಟಿ ಮಾಡುವುದ್ಯಾಕೋ?
Next post ಕನ್ನಡ ಕಾವ್ಯಧಾತುವಿಗೆ ಅಂಟಿಕೊಂಡಿರುವ ಆತ್ಮೀಯ ಕವಿ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys