ಮರೆಯದಿರಣ್ಣ ಕನ್ನಡವ; ಜನ್ಮ ಕೊಟ್ಟ ಈ ಕನ್ನಡವ ಮಾತು ಕೊಟ್ಟ ನುಡಿಗನ್ನಡವ ತುತ್ತು ಕೊಟ್ಟ ತಾಯ್ಗನ್ನಡವ || ಹಳಿಯದಿರಣ್ಣ ಕನ್ನಡವ; ತಾಯ್ಮೊಲೆ ಉಣಿಸಿದ ಕನ್ನಡವ ವಿದ್ಯೆಯ ನೀಡಿದ ಕನ್ನಡವ ಸಭ್ಯತೆ ಕಲಿಸಿದ ಕನ್ನಡವ ಅಳಿಸದಿರಣ್ಣ ಕನ್ನಡವ; ಶತಶತಮಾನದ ...

ಮೂಲ: ಸ್ಯಾಫೋ (ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ) ದೇವಿ ಆಪ್ರೋದಿತೆಯೆ ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ! ಎಲ್ಲರಿಗು ಮಿಗಿಲು ಸಾವಿಗೂ ದಿಗಿಲು ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ ಅಂಗಲಾಚುವೆ ದೇವಿ ಬಳಿಸಾರಿ ಅಡಿಯ ದು...

ಕಿನ್ನರ ಕಿಂಪುರುಷರ ನೌಕೆಗಳಂತೆ ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,- ನೂರೊಂದು ಕಡೆಗೆ ತೇಲುತಿಹುದು ನೋಡಾ! ಬೆಣ್ಣೆ ಕಡಿದ ಮಜ್ಜಿಗೆಯಂತೆ ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ! ತಪತಪನೆ ಕಾಯ್ದು ಕೋಟಿ ಸೂರ್ಯರಂತೆ ಕಣ್ಣು ಕುಕ್ಕಿ ...

ವೀರಭದ್ರನೆ ಏಳು ವೀರ ರುದ್ರವ ಹೇಳು ಬಾಳೆಹೊನ್ನೂರಿನಲಿ ಕೂಗಿ ಹಾಡು ಜ್ಞಾನ ಖಡ್ಗವ ಬೀಸು ಶಿವನ ಢಮರುಗ ಢಮಿಸು ಕಡಲ ಅಲೆಗಳ ರುದ್ರ ನಾಟ್ಯವಾಡು ನೋಡು ದುಷ್ಟರ ಕೂಟ ರುಂಡಮುಂಡರ ಕಾಟ ತಾರಕನ ದ೦ಡುಗಳ ಹಿಂಡು ಮೆಟ್ಟು ಸತ್ಯವಂತರ ಉಳಿಸು ಹಗಲುಗಳ್ಳರ ಅಳಿ...

ಗೋಳನಂಜಿನ ಗಾಳಿ ಬೀಸೆ, ಬಾಳಿನಬಳ್ಳಿ, ಮುರುಟಿರಲು ಗಾಸಿಗೊಂಡು ಶಾಪದೊಲು ಚಂಡಾಶು ಶಾಂತಿಯನ್ನೇ ತಳ್ಳಿ ತಾಂಡವವ ನಾಡಿತಂದು ಆಸೆಗಳು ಕನಸುಗಳು ಮನದೆಲ್ಲ ಉಸಿರುಗಳು ಹಳೆತು ಕೊಳೆ ಕಹಿಯಾದವು ಬಾಳ ಬೆಳೆಸಲು ಬಗೆದ ಭಾವಗಳು ರಾಗಗಳು ಇರಿವ ಕೂರಲಗಾದವು. ನ...

ರೆಕ್ಕೆಯ ಕುದುರೆಯನೇರಿ, ಹಕ್ಕಿಯ ಹಾದಿಯ ಹಿಡಿದು, ದಿಕ್ಕಿನ ತುದಿಗಿದ್ದ ಚಿಕ್ಕೆಗಳ ನಾಡಿನಲ್ಲಿ – ಮಾತಿನ ಗಿಳಿಯ ದೂತಿಯ ಮಾಡಿ, ಪ್ರೀತಿಯ ರಸದ ಗೀತಿಯ ಹಾಡಿ, ವೇತಾಳರಾಯನಾ ಕೋಟೆಯ ನೋಡಿ – ರಕ್ಕಸರನ್ನು ಕಾದಿ ಕೊಂದು, ಬೊಕ್ಕಸವನ್ನು ...

ಮನದ ಮೌನದೊಳರಳ್ವ ಕವನವೆಮ್ಮನು ಮೌನದ ವನ ಕಾನನಕೊಯ್ಯಲು ಬೇಕು ಮನ, ಜನ, ವಾಹನ, ಯಂತ್ರದೊಳೊಂದಷ್ಟು ಮೌನ ಮರಳಿದರಾಗ ಪ್ರಕೃತಿ ಗಾನವೇ ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ *****...

ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ, ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ; ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ, ನಮ್ಮ ನಾಯಕನನು ಹೂಳುತಿದ್ದಾಗ. ಹೂಳಿದೆವವನನು ಸರಿಹೊತ್ತಿನಿರುಳಲಿ, ಮಣ್ಣ ಬಂದೂಕದ ಮೊನೆಯಿಂದ ತಿರುವಿ; ನುಸುಳಿ ಬರುವ ಬೆಳದಿ...

ಓ ನನ್ನಣ್ಣ ಅಕ್ಕ ತಂಗಿಯರೆ ನನ್ನಾತ್ಮ ಸಂಬಂಧ ಸಖ ಸಖಿಯರೆ ತೋಡಿಕೊಳ್ಳಲೆ ನನ್ನ ಭಾವಗಳ ರಾಶಿ ತುಂಬಿಕೊಳ್ಳಲೆ ನಿಮ್ಮ ನಿಸ್ವಾರ್ಥ ಪ್ರೀತಿ ಕಾಶಿ ಕಳೆದವು ಎತ್ತಲೋ ಆ ಭವ್ಯ ದಿನಂಗಳು ಎನ್ನ ಬದುಕಿನಲಿ ತಂದವು ಬೆಳಕಬಾಳು ಅಲ್ಲಿ ಒಂದೊಂದುಗಳಿಗೆ ಚಿನ್ನವ...

ನೆನಪೇ, ನೀನೇಕೆ ಹೀಗೆ ಕಾಡುತ್ತೀಯಾ? ಮನಸ್ಸನ್ನೇ ಚುಚ್ಚಿ ಸಾಯಿಸುತ್ತೀಯಾ? ನನ್ನ ಸತಾಯಿಸುತ್ತೀಯಾ? ಬಾಲ್ಯದ ತುಂಟತನಗಳ ನೆನಪು ಮುಖದಲ್ಲಿ ತಂದ ನಗು ಬೇಸರದ ಕ್ಷಣಗಳು ನೆನಪಾಗಿ ಮರುಗುತ್ತೇನೆ ಹಣೆಬರಹಕ್ಕಾಗಿ ವೇದನೆಯ ಬೇನೆಗೆ ಸಿಲುಕಿ ಕೊರಗುತ್ತೇನೆ...

1...1819202122...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...