ತಿರೆಯ ಭಾರವ ಹೊತ್ತು ಬಳಲಿರುವ ಫಣಿ ತನ್ನ ಹೆಡೆಯೊಂದರೊಳು ಎದ್ದು ಉಳಿದುದರೊಳಾಲಸ್ಯ- ವಡೆವಂತೆ, ಹೆರರ ಸಿರಿಬಾಳ್ತನದ ಭಾರವನು ಶಿರದಿ ಪೊತ್ತೀ ಜನತೆ ತನ್ನ ಮಿಕ್ಕಂಗದೊಳು ಪ್ರಾಣಮಾತ್ರಳೆ ಆಗಿ ಜ್ಞಾನಜಡತೆಯ ಪಡೆದು ಇಲ್ಲಿ ಈ ದೇಗುಲದ ಸರಸತಿಯ ಕೃಪೆಯಿಂದ ಬಲ್ಲತನವಾಂತಿಹಳು ತನ್ನೊಂದು ಮುಖದೊಳಗೆ- ತಾನಿಹೆನು, ತನ್...

-೧- ಸಮುದ್ರ ಅಬ್ಬರಿಸುತ್ತಿದೆ ಮನಸಿನಂತೆ ದಂಡೆಗೆ ತಿಳಿದಿದೆ ತಳಮಳ ನನ್ನವರಿಗೆ? -೨- ದಂಡೆಯ ಭಾಷೆ ಪ್ರೇಮ ಇಲ್ಲಿ ನಡೆದವರಿಗೆ ದಂಡೆ ಅರ್ಥವಾಗಿಲ್ಲ ಕಡಲ ಧ್ವನಿ …..ಕೂಡಾ -೩- ದಂಡೆಯಲ್ಲಿ ಅವರು ಆಗಿನಿಂದಲೂ ತರ್ಕಿಸುತ್ತಿದ್ದಾರೆ ಅನುಸಂಧಾನ ಆಗುತ್...

ನನ್ನ ಬಾಲ್ಯದಲ್ಲಿ ತೀವ್ರವಾಗಿದ್ದ ಎರಡು ಬಯಕೆಗಳಿದ್ದವು. ಒಂದು: ಶಾಲೆ ಇಲ್ಲದಾಗ, ಬೇಸಗೆಯ ರಜೆ ಬಂದಾಗ ದನ ಮೇಯಿಸುತ್ತಾ ಕನಕಪುರದ ಕಡೆಯಿಂದ ಬೆಂಗಳೂರಿಗೆ ಹೋಗುವ ಲಾರಿ ಬಸ್ಸುಗಳ ಶಬ್ದ ಕೇಳಿದಾಗ ನನ್ನ ಕಲ್ಪನೆಯ ಬೆಂಗಳೂರು ಕಣ್ಣಮುಂದೆ ನಿಲ್ಲುತ್ತಿ...

ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು, ಕತ್ತಲ ಕೊನೆಯ ಸಾರುತ ಹಕ್ಕಿಯ ಹಾಡನು ತುಳುಕಿವೆ ಗೂಡುಗಳು. ಬೆಳಕಾಗದ ಗೂ...

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ ಇರದ ಚಿತ್ತ ಒಲವಿನ ಮುತ್ತುಗಳಾಗುವ ಸಮಯ...

ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು, ಇದು ಯಾರು? ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನೇ ಬಣ್ಣಿಸಲು ಹೊರಟಿಹೆನು; ನಿನ್ನ ನೆನವಿನಲೆನ್ನ ಮನದ ಮಾತುಗಳೆಲ್ಲ ರಂಗಾಗಿ ಹಾರುತಿದೆ!...

ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ – ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ – ಗೆಳತಿಯರಾಗಿರೋಣ’. ಅವಳ ಮಾತು ಅವನಿಗೆ ಅರ್ಥವಾಯಿತೋ, ಅಲ್ಲ ಕೇಳುವ ವ್ಯವ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...