ಊರುಗೋಲಿನ ಅಜ್ಜ
ಆಸ್ಪತ್ರೆಯ ಆವರಣದಲಿ
ಒಬ್ಬನೇ ಮೆಲ್ಲನೆ ತಿರುಗಿದಾಗ
ಮೂಲೆಯ ಹೂಕುಂಡದಲಿ
ತುಂಬ ಬಾಡಿದ ಹೂಗಳು.
ಅಲ್ಲಿ ಬಿದ್ದಿರುವ ಅಳಲು
ಯಾವುದೋ ಪಾಪಕಂಡ
ಬದುಕು ಹೊತ್ತೊಯ್ಯುವ ನರಕ,
ಯಾತನೆಗಳಿಗೆ ಮುದಿ ಮನುಷ್ಯ
ಕಣ್ಣುಗಳು ಭಾರಭಾರ.
ತೊಟ್ಟುಕ್ಕುವ ಜೀವರಸ
ಮೈಗೆ ಹಚ್ಚಿಕೊಂಡ ರಕ್ತ,
ಎಲ್ಲೂ ಹರಿದು ಸ್ಪುರಿಸಲಿಲ್ಲ,
ಎದೆಯಾಳಕೆ ಇಳಿದ ಪ್ರೀತಿ,
ಉರಿಯುತ್ತಿರುವ ದೀಪ ಮಂಕು.
ಕಳೆದು ಹೋದ ಗಿಡಮರ
ಮಬ್ಬಾದ ಕಾಮನಬಿಲ್ಲು
ಮುದುಡಿದ ಮನಸ್ಸು
ಕೈ ಹಿಡಿದು ನಡೆಸದ ಮೌನದಾರಿ
ಹೊತ್ತುಕೊಂಡು ಹೊರದಬ್ಬಿದ ದಿನಗಳು.
*****


















