ಜಗದ ಪರಿಗೆ ಬೇಸತ್ತ ಬುದ್ಧ
ನಡುರಾತ್ರಿ ಚಕ್ಕನೆ ಹೊರಬಿದ್ದು
ಭೋದಿವೃಕ್ಷದ ಕೆಳಗೆ ಕುಳಿತು
ಮಹಾನ್ ಭಗವಾನ್ ಬುದ್ಧನಾದ
ಯಶೋಧೆ ಹಗಲಿನಲ್ಲಿಯೇ
ಹೊರಬಿದ್ದಿದ್ದರೂ
ಅಗ್ನಿ ಪರೀಕ್ಷೆಯ ರಾಮಾಣವಾಗಿ
ಅಡವಿ ಸೇರಿಬಿಡುತ್ತಿದ್ದ
ರಾಮನ ತಮ್ಮ ಬುದ್ಧ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)