
ಇನ್ನೆಷ್ಟು ದಿನ ಹೀಗೆ? ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುಮ್ಮನಿರುವುದು ಗೆದ್ದಲು ಕಟ್ಟದ ಹುತ್ತದೊಳಗೆ ಹಾವೊಂದು ಬೆಚ್ಚಗೆ ನಿದ್ರಿಸುವುದು ಕಾಗೆ ಇಟ್ಟ ಮೊಟ್ಟೆಗಳ ನಡುವೆ ಕೋಗಿಲೆಯೊಂದು ತಣ್ಣಗೆ ಮರಿಯಾಗುವುದು ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು ತ...
ನಾನು ನಾನೆಂಬ ಹಮ್ಮಿನಲಿ ಬೀಗಿ ಸುಮ್ಮನೇ ನವೆದೆ ಅಜ್ಞಾನಿಯಾಗಿ ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ ಲೋಕಕಾಸರೆ ಎಂದು ತಿಳಿಯದಾಗಿ ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ ಕಣ್ಣಿದ್ದರೂ ಏನು, ಕತ್ತಲಲಿ ಕುರುಡನೇ, ...
ಮುಕ್ತನಾಗಬೇಕೆಂಬ ನನ್ನ ಆಲೋಚನೆಯೇ ನನ್ನನ್ನು ಬಂಧನದ ಕೂಪಕ್ಕೆ ತಳ್ಳಿತಲ್ಲಾ? *****...
ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. ಏನು ಮಾಡಬೇಕೊ, ಇಲ್ಲಿಂದಲೇ ಹೇಳು’ ಎಂದು ಕಟ್ಟುನಿಟ್ಟಾಗಿ ಹೇಳಿ ಅವಳನ್ನು ಯಾವ ಕೆಲಸ ಮಾಡೋಕೂ ಬಿಡಲಿಲ್ಲ. ಆಳುಗಳು ...
“ಮನೆಯು ಪಾಲಾಯ್ತು ಒರ್‌ಬಾಳ್ವೆ ಹೋಳಾಯ್ತು ಕರುಳೆರಡು ಸೀಳಾಯ್ತು ಅಯ್ಯೊ! ಅಕಟಕಟಾ! ಎರಡಾಯ್ತು ಬಾವುಟ” ಎಂದು ಗೋಳಾಡದಿರು ಓ, ಗೆಳೆಯನೇ! ಕಲಹ ಪಾಲಿಗೆ ಮೊದಲು: ಹೊಗೆಯಿತಸಮಾಧಾನ, ಉರಿಯಿತು ದುರಭಿಮಾನ. ತಮ್ಮ, ಪಸುಗೆಯ ಬಯಸಿ ಕೈಮಾಡಿದ...
ಕುಂತರೂ ನಿಂತರೂ ಸಂತರೂ ಮಹಾಂತರೂ ಶಾಂತರೂ ದಿಗ್ಭ್ರಾಂತರೂ ಯಾರು ಏನೇ ಅಂತರೂ ತುಂತುರು ಮಳೆ ನಿಲ್ಲದು ಅಲ್ಲಿಯು ತುಂತುರು ಇಲ್ಲಿಯು ತುಂತುರು ಆಚೆ ತುಂತುರು ಈಚೆ ತುಂತುರು ಮೇಲೆ ತುಂತುರು ಕೆಳಗೆ ತುಂತುರು ಎಲ್ಲೆಲ್ಲಿಯು ತುಂತುರು ಅಂತೂ ಇಂತೂ ತುಂತ...
ಸಾವಿರ ಬಗಯಲಿ ಸಾಗುತಿದೆ ಸ್ವಾತಂತ್ರ್ಯದ ಲಾಸ್ಯ, ಬಾನು ಬುವಿಯೂ ಬರೆಯುತಿವೆ ಸಿರಿಬೆಳಕಿನ ಭಾಷ್ಯ. ಒಣಗಿದ ಮರದಲಿ ಸಾಗುವ ಚೈತ್ರನ ಚಿಗುರಿನ ದಾಳಿಯಲಿ, ಮುಗಿಲ ಬಾಗಿಲ ಸರಿಸಿ ಸುರಿಯುವಾ ನಿರ್ಮಲ ಧಾರೆಯಲಿ, ಕಾಷ್ಠದ ಸೆರೆಯಲ್ಲಿ ಕುದಿಯುತ ಮರೆಯಲ್ಲಿ ...
ನೀವೂ ಆಗಬೇಕೇ ಒಬ್ಬ ಕೆ.ವಿ.ಸುಬ್ಬಣ್ಣ ಹಾಗಿದ್ದರೆ ನಾಹೇಳೋದನ್ನ ಕೇಳಿ, ಭಾಷಣ, ಬರವಣಿಗೆ, ನಾಟಕ, ಬಣ್ಣ ಗಿಣ್ಣ, ಅವೆಲ್ಲ ಅನಂತರ ಮೊದಲು ರಂಗಿನ ಬಟ್ಟೆಯ ಸಂಚಿಯಿಂದ ಒಂದೊಂದಾಗಿ ತೆಗೆದು ಕೈಯಲ್ಲಿ ಸೇರಿಸಿಕೊಳ್ಳಿ ವೀಳೆದೆಲೆ, ಅಡಿಕೆ, ಒಂದಿಷ್ಟು ಸುಣ...
ಯಾಕೆ ಹಡೀಬೇಕು ಇವರನು ಯಾಕೆ ಹಡೀಬೇಕು || ಹೆತ್ತೂ ಹೊತ್ತು ತೊಳೆದೂ ಬಳಿದೂ ಮುದ್ದಿಸಿ ಹೊದ್ದಿಸಿ ಊಡಿಸಿ ಉಣ್ಣಿಸಿ ಸಾಕೀ ಬೆಳೆಸೀ ನೂಕಿಸಿಕೊಳ್ಳಲು || ಯಾಕೆ ಹೇಳಿದ ಮಾತನು ಕೇಳದೆ ಇದ್ದರು ಹಡೆದವರನ್ನು ಸುಮ್ಮನೆ ಬಿಡದೆ ಗದರಿಸಿ ಬೆದರಿಸಿ ಕುತ್ತಿಗ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....














