Home / Poem

Browsing Tag: Poem

ದಾರಿಯುದ್ದಕ್ಕೂ ಚಡಪಡಿಕೆ ಪಕ್ಕಕ್ಕೆ ಪ್ರಾಕಿನ ಅಜ್ಜ ದೂರ ಸರಿಯುವ ಬಯಕೆ ಆತ ನಗುತ್ತಿದ್ದಾನೆ, ಬೊಚ್ಚು ಬಾಯಗಲಿಸಿ ಮತ್ತದು ತಂಬಾಕು ಸೋನೆ ವಾಸನೆ ಕವಳ ಪೀಕು ಆ ಕಣ್ಣುಗಳಲ್ಲಿ ಹಸಿವು ಪ್ರಾಯದ ಬಯಕೆ, ಯಯಾತಿಯೇ ಇರಬೇಕು ಸುಕ್ಕುಗಟ್ಟಿದ ಚರ್ಮದ ಒಳಗೂ ...

ಇಂದ್ರ: ಹಚ್ಚಿ ಹೊಗೆಬತ್ತಿ ನೋಡುವೆನು ಕಣ್ಣೆತ್ತಿ ಬಾರಿಬಾರಿಗು ಜೀವದ ಪವಾಡ ಕೋರಿ ನಿನ್ನೆಯಷ್ಟೇ ಬದುಕು ಮೈತುಂಬಿ ಉದ್ದಕು ನಿಂತಿದ್ದ ಒಡಲು ಇಂದು ಕೇವಲ ಕಲ್ಲು ಎಂದರೆ ನಂಬುವೆನೆ ನೊಡುವ ಕಣ್ಣುಗಳನೆ ಒಬ್ಬಾತನ ಸ್ನೇಹದಲಿ ಇನ್ನೊಬ್ಬನ ಮೋಹ ಹಿಡಿಯಬಯ...

ಅಮ್ಮಾ, ನದಿ ಯಾಕೆ ನಗುತ್ತಿದೆ? ಬಿಸಿಲು ಕಚಗುಳಿ ಇಟ್ಚಿದೆ. ಅಮ್ಮಾ, ನದಿ ಯಾಕೆ ಹಾಡುತ್ತಿದೆ? ಕೋಗಿಲೆ ನದಿಯ ಕಲರವ ಹೊಗಳಿದೆ. ಅಮ್ಮಾ, ನದಿಯ ನೀರು ಯಾಕೆ ತಣ್ಣಗಿದೆ? ಒಮ್ಮೆ ಲವ್ವು ಮಾಡಿದ್ದ ಹಿಮಗಡ್ಡೆಯ ನೆನಪಾಗಿದೆ. ಅಮ್ಮಾ, ನದಿಗೆಷ್ಟು ವರ್ಷ ವ...

ಬಾಳುವೆನು ಭಗವಂತನಾನಂದ ತೊಟ್ಟಿಲಲಿ ಈ ಹಗಲು ರಾತ್ರಿಗಳ ತೂಗಿ ತೂಗಿ ಆತ್ಮ ಜೋಜೋ ಮಗುವೆ ಬಿಂದು ಜೋಜೋ ಶಿಶುವೆ ಜೋಕಂದ ಜೋಗುಳದ ನಾದವಾಗಿ ಬೆಚ್ಚನೆಯ ತೊಟ್ಟಿಲಲಿ ಕೆನೆಬೆಲ್ಲ ಚುಂಬನದಿ ಸಕ್ಕರೆಯ ಎದೆಹಾಲ ಪಾನಗೈವೆ ವಿಶ್ವದೇವತೆ ತಾಯಿ ಹೆತ್ತಾಯಿ ನಲ್ದ...

ಎದೆಯ ಹೊಂಡದಲೆಲ್ಲ ಎಚ್ಚರದಿ ಕೈಯಾಡಿ ಹುಡುಕಿ ಎತ್ತಿದ್ದೇನೆ ನಿನ್ನ, ನಿನ್ನ ಮಲಗಿಸಿ ಮೈಯ ಅಂಗುಲಂಗುಲವನ್ನು ದುರ್ಬೀನುಗಣ್ಣಿನಲ್ಲಿ ಬೆದಕಿ ನೋಡಿದರೆ ಇದೇನು, ಎಲ ನೀನು ಪ್ರತಿ ಕಣದಲೂ ಖುದ್ದು ನಾನು! ಜವಳಿಯಂಗಡಿಯಲ್ಲಿ ಗಂಟೆಗಟ್ಟಲೆ ಹುಡುಕಿ ಬಟ್ಟೆ...

ತನು ಮನ ಸೆಳೆಯುವ ಬೃಂದಾವನಕೆ ಹೋಗುವ ಬಾರೆ ಸಖಿ ಕರೆಯೋಲೆಯನಿತ್ತು ಕರೆಯುತಿದೆ ಬೃಂದಾವನ || ನವರಸ ಶೃಂಗಾರ ರಸದೌತಣ ನವ ಚೈತನ್ಯ ಮೈತಾಳಿತ್ತು ರಾಧೆ ಕೃಷ್ಣೆಯರ ಗೋಪಿಕೆಯರ ವನ ಬೃಂದಾವನ || ಕಿನ್ನರ ಲೋಕದ ಕಿನ್ನರಿಯ ನರ್‍ತನ ಜಲದಿನಿಂದು ಮೆರೆವ ಸ್ವ...

ಹಸಿವು ರೊಟ್ಟಿಗಾಗಿ ರೊಟ್ಟಿ ಹಸಿವಿಗಾಗಿ ಕಾಯುವುದು ಎಂದೂ ಒಂದೇ ಅಲ್ಲ. ಕಾಯುವಿಕೆಯ ಅಂತರ ಅರಿವಾಗಿ ಕಂದಕ ತುಂಬಿದರೆ ಸಂಗತ ತುಂಬದಿದ್ದರೆ ಅದರದರ ಪರಿಧಿಯಲೇ ಅಸ್ತಂಗತ. *****...

ಸಾಲುಗಟ್ಟಿ ಸಾಗಿದ ಇರುವೆಗಳು ಕವಿತೆ ಮೆರವಣಿಗೆ ಹೊರಟವೆ ಶಬ್ದಗಳ ಸೂಕ್ಷ್ಮ ಜೇಡನ ಬರೆಯಲಿ ಸಿಲುಕಿ ಹೊರ ಬರಲಾರದೇ ಒದ್ದಾಡಿವೆ ಸುರಿದ ಮಳೆ ಅಂಗಳದ ಥಂಡಿ ಹರಡಿ ಹಾಸಿದ ಹನಿ ಹನಿಯ ಹೆಗ್ಗುರುತು ಗುಳಿಯಲಿ ಅವಳ ಕಣ್ಣುಳು ಏನೋ ಅರಸಿ ಬಳಲಿವೆ ಕರಿಮೋಡದ ತ...

1...8384858687...449

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...