ಅಮ್ಮಾ, ನದಿ ಯಾಕೆ ನಗುತ್ತಿದೆ?
ಬಿಸಿಲು ಕಚಗುಳಿ ಇಟ್ಚಿದೆ.

ಅಮ್ಮಾ, ನದಿ ಯಾಕೆ ಹಾಡುತ್ತಿದೆ?
ಕೋಗಿಲೆ ನದಿಯ ಕಲರವ ಹೊಗಳಿದೆ.

ಅಮ್ಮಾ, ನದಿಯ ನೀರು ಯಾಕೆ ತಣ್ಣಗಿದೆ?
ಒಮ್ಮೆ ಲವ್ವು ಮಾಡಿದ್ದ ಹಿಮಗಡ್ಡೆಯ ನೆನಪಾಗಿದೆ.

ಅಮ್ಮಾ, ನದಿಗೆಷ್ಟು ವರ್ಷ ವಯಸ್ಸಾಗಿದೆ?
ಸದಾ ಎಳೆಯ ವಸಂತದಷ್ಟು

ಅಮ್ಮಾ, ನದಿಯ ನೀರು ಯಾಕೆ ಯಾವಾಗಲೂ ಓಡುತ್ತದೆ?
ಮಗು ಮನೆಗೆ ಬರಲಿ ಎಂದು ಅಮ್ಮ ಸಮುದ್ರ ಕಾದಿರುತ್ತದೆ.
*****
ಮೂಲ: ಶುನ್‌ತಾರೋ ತನಿಕಾವಾ