
ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. **...
ಮದುವೆಯಾದರೂ ಬ್ರಹ್ಮಚಾರಿಯ ಬಾಳೇ ಹೀಗೆ; ಹಗಲೆಲ್ಲಾ ತುತ್ತಿಗಾಗಿ ದುಡಿತ ರಾತ್ರಿ ಎಲ್ಲಾ ಮುತ್ತಿಗಾಗಿ ತುಡಿತ! *****...
ಧಗಧಗಿಸುವ ಒಲೆಯ ಮೇಲೆ ರೊಟ್ಟಿ ಬೇಯಿಸಲು ಕೂತ ಕಾವಲಿಗೆ ತನ್ನಿಂದ ರೊಟ್ಟಿಯ ಹುಟ್ಟೋ ಹಸಿವು ಪೊರೆ ಕಳಚಿ ಬಯಲಾಗುವ ಸಾವಿನ ಗುಟ್ಟೋ ಬರಿದೆ ಜಿಜ್ಞಾಸೆ. *****...
ಪ್ರಿಯೆ ನಾ ಬರೆದ ಪುಸ್ತಕಗಳಲ್ಲಿ ನಿನಗ್ಯಾವುದು ‘ಪ್ರಿಯ’ ಪ್ರಿಯವಾಗಿರುವುದೊಂದೇ ನಿಮ್ಮ ಚೆಕ್ಪುಸ್ತಕ ಪ್ರಿಯಾ *****...













