ಚುಟುಕ

ಬಿ. ಪಿ.

ಬರಬರನೆ ಪ್ರೆಶರ್‍ ಏರುವ ಟ್ಯೂಬ್ ಒಡೆಯಬೇಕೆಂದಾಗ – ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್‍. *****

ಸಾವಸುದ್ದಿ

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ […]

ರಾತ್ರಿ

ಕನಸುಗಳು ಚಿಗುರಿಸುವ ರಾತ್ರಿಗಳೇ ಬೆಳಕಿಗೇಕೆ ಕೈ ಚೆಲ್ಲಿಕೊಳ್ಳುತ್ತೀರಿ? ಎಲ್ಲಾ ಕನವರಿಕೆ, ಊಹೆ, ಭ್ರಮೆ ಯಾವುದಾದರೇನು ಅಂತಿರಾ? *****

ಯಾವ ಹುತ್ತದಲ್ಲಿ ಯಾವ ಹಾವು

ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****

ವನ ಸಂಪತ್ತು

ಬೇರು, ಕಾಂಡ, ಕೊಂಬೆ, ಎಲೆ ಹೂ, ಹಣ್ಣು, ಹೊತ್ತ ಮರ ಯೋಚಿಸುತ್ತದೆ: ‘ಈ ಸಂಪತ್ತು ಯಾರಿಗೆ ಕೊಡಲಿ?’ ನರ ಯೋಚಿಸುತ್ತಾನೆ; ಬೇಕೀಗ ನನಗೊಂದು ಕೊಡಲಿ! *****