೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ಮೂಳೆಯ ಮುರಿವೆನೆಂಬ ಗರುವದನುಡಿಯ ಗಂಟಲಲಿ ಹಿಡಿಯಿರಿನ್ನು! ೨...

ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ...

ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು ನಂಬಿ ನಿನ್ನಯ ಹೊಗಳಿ ದಣಿಯದೆ ಹಾಡಿ ಕುಣಿದರು ದಾಸರು || ೧ || ಹುಟ್ಟಿ ಸಾ...

ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ ಬೇಡಯ್ಯ ಬೇಯಿಸಿದ ತತ್ತಿಯಾದರೆ ಒಂದೆರಡು ಪರವಾಯಿಲ್ಲ ಒತ್ತಾ...

ಕತೆಗಾರರು ಯಶಸ್ವಿ ಪತ್ರಿಕಾ ಲೇಖಕರಾಗರೆಂದು ಯಾರೋ ನುಡಿದ ನೆನಪಿದೆ. ಅದರಲ್ಲಿ ಸತ್ಯವಿದ್ದಿರಬೇಕು. ನಾನು ಕತೆಗಾರನಂತೆ. ಹಾಗೆಂದು ಜನರು ಹೇಳುವರು. ಜನರು ಒಗ್ಗಟ್ಟಾಗಿ ಇಟ್ಟ ಹೆಸರು, ತೊಟ್ಟಿಲಿನಲ್ಲಿ ತಂದೆ-ತಾಯ್ಗಳು ಇರಿಸಿದ ಹೆಸರಿಗಿಂತ ಬಲವುಳ್ಳ...

ಇಪ್ಪತ್ತು ಮಹಡಿ ಕಟ್ಟಡ ಕೆಳಗಿನಿಂದ ಗುಂಡ ಮೇಲೆ ನೋಡುತ್ತಾ ನಿಂತಿದ್ದ. ಹಾದಿ ಹೋಕರ್‍ಯಾರೋ ಕೇಳಿದ್ರು – “ಏನು ನೋಡುತ್ತಿರುವೆ?” “ಮೇಲಿಂದ ನನ್ನ ವಾಚು ಕೆಳಗೆ ಬಿತ್ತು..” “ಅದು ಇಲ್ಲೆಲ್ಲೋ ಬಿದ್ದಿರುತ...

ಸತ್ತಂಗ ನೀ ಮಾಡ ಅತ್ತಂಗ ನಾ ಮಾಡ ಪೂಜಾರಿ ನಾನಽ ಪರಮೇಶಿ ||ಪಲ್ಲ|| ಕಲ್ಲಾಗಿ ನೀ ಕೂಡ ಬೆಲ್ಲಾ ನಾ ಕೊಡತೇನ ಬಕುತರು ಬರಲೇ ನಿನಗುಡಿಗೆ ಗಂಟಿ ಗುಗ್ಗುಳ ನಿನಗ ಹುಗ್ಗಿ ಹೋಳಿಗಿ ನನಗ ಬಂಗಾರ ಕಳಸಾ ನಿನಮುಡಿಗೆ ||೧|| ನೀ ಕಲ್ಲು ಆದರ ಕಲ್ಲೆಲ್ಲ ಕೈವಲ್...

ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ “ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ” ಎಂದು ಕೊಂಡಿತು. ಮತ್ತೊಂದು ಬುಗ್ಗೆ “ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ ಕಾಲ ಬಾ...

ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ ಹೋರಾಟ ನಡೆಸುತ್ತ ಒಂದಾಗಿ ಬದುಕುತ್ತ ಹೊಸ ಗೂಡು ಹುಡುಕುತ್ತ ನಡೆದಾಡಿದ || ಕಾಡು ...

ಮಲಗು ಮುದ್ದಿನ ಕಣ್ಮಣಿ ಮಲಗು ಪ್ರೀತಿಯ ಚಿನ್ಮಯಿ| ಮಲಗೂ ಮಲಗೆನ್ನ ಅರಗಿಣಿ ಜೋಗುಳವ ಹಾಡುತಲಿ ತಂಪೆಲರ ಬೀಸುತಲಿದೆ ತಂಗಾಳಿ || ನಿದಿರೆಯು ನಿನ್ನನು ಕರೆದೊಯ್ಯುವಳು ಚಂದ್ರನ ಜೊತೆಗೂಡಿ ಆಟವನಾಡುವಳು| ಬಣ್ಣಬಣ್ಣದಗೊಂಬೆಗಳ ಕೊಡುವಳು ಮುಗಿಲ ಜೋಕಾಲಿ ...

ಇಂದು ಪೆಟ್ರೋಲನ್ನು ಯತೇಚ್ಛವಾಗಿ ಯಂತ್ರಗಳಿಗೆ ಇತರೆ ವಸ್ತುಗಳ ಚಲನೆಗೆ ಬಳೆಸುತ್ತೇವೆ. ಹೀಗೆ ಬಳೆಸುತ್ತಿದ್ದರೆ ಭೂಮಿಯಲ್ಲಿ ದೊರೆಯುವ ಈ ಇಂಧನ ಬಳಕೆಗೆ ತಕ್ಕಂತೆ ಸಾಕಾಗದೆ ಕಡಿಮೆಯಾಗುವ ಸ್ಥಿತಿಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೊಂದು ಮುಲದಿಂ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...