ಕೋಲುರನ್ನದ ಕೋಲುಚಿನ್ನದ ಕೋಲುಹವಳದ ಪವಳದ ಸ್ವಾಮಿ |
ಕೋಲು ಹವಳದ ಪವಳದ ||
ಕೋಲು ವಯ್ದುಪಾಡಿರೆ ನಮ ಬಾಲನ ಗೋನಾಲನ ಸ್ಟಾಮಿ |
ಬಾಲನ ಗೋಪಾಲನ || ಪಲ್ಲ ||
ಮಹಿಮೆ ತೋರುತೆ ಬಂದಳಾಕಿ ಮಹಸತಿಯ ತೇಜನ ಬೀರುತೆ ಸ್ವಾಮಿ |
ಮಹಸತಿಯ ತೇಜವ ಬೀರುತೆ ||
ಮಹಿಮೆ ಪಡೆಯಲು ಬಯಸುವವರಿಗೆ ಮಹಸತಿಯ ಮಾರ್ಗವ ತೋರುತೆ ಸ್ವಾಮಿ
ಮಹಸತಿಯ ಮಾರ್ಗವ ತೊಡರುತೆ ಸ್ವಾಮಿ || ೧ ||
ಅತ್ತೆಮಾವರ ಸೇವೆಮಾಡುವ ಚೊಕ್ಕಸಾಧ್ವಿಯು ಯೆನಿಸುತೆ ಸ್ವಾಮಿ |
ಚೊಕ್ಕಸಾಧ್ವಿಯ ಯೆನಿಸುತೆ ||
ಸುತ್ತುಜನ ಮಧ್ಯದಲಿ ಪೊಳೆವಾ ಶ್ರೇಷ್ಠಪೆಣ್ಮಣಿಯೆನಿಸುತೆ ಸ್ವಾಮಿ |
ಶ್ರೇಷ್ಠಪೆಣ್ಮಣಿ ಯೆನಿಸುತೆ || ೨ ||
ಪತಿಯೆ ದೈವತವೆಂದು ಭಾವಿಸಿ ಸತತಲವನನು ಸೇವಿಪ ಸ್ವಾಮಿ |
ಸತತಲವನನನು ಸೇವಿಪ ಸ್ವಾಮಿ
ಪತಿಯ ಮನೆದೇವತೆಯು ಯೆನಿಪಳು ಸಾಧ್ವಿಮಣಿ ಕಸ್ತೂರಿಯು ಸ್ವಾಮಿ |
ಸಾಧ್ವಿಮಣಿ ಕಸ್ತೂರಿಯು || ೩ ||
ವೀರಪುತ್ರಿಯು ವೀರಪತ್ನಿಯು ವೀರಪುತ್ರರ ಮಾತೆಯೂಸ್ವಾಮಿ |
ವೀರಪುತ್ರರ ಮಾತೆಯು ||
ಧೀರಗುಣಸಂಪನ್ನೆ ರಾಷ್ಟ್ರದ ಹೆಮ್ಮೆಯಸತಿ ಯೆನಿಪಳೂ ಸ್ವಾಮಿ।
ಹೆಮ್ಮೆಯಸತಿ ಯೆನಿಪಳು || ೪ ||
ಶ್ರೇಷ್ಠ ಗಾಂಧಿಯ ಪ್ರೇಮ ಪುತ್ಚಳಿ ಕಸ್ತೂರಿ ಪರಿಮಳ ಬೀರ್ವಳು ಸ್ವಾಮಿ |
ಕಸ್ತೂರಿ ಪರಿಮಳ ಬೀರ್ವಳು ||
ಶ್ರೇಷ್ಠ ಪೆಣ್ಮಣಿ ಪಥದಿ ನಡೆಯುತೆ ನಾಡ ಹೆಮ್ಮೆಯ ಬೆಳಿಪಳೂ ಸ್ವಾಮಿ |
ನಾಡ ಹೆಮ್ಮೆಯ ಬೆಳಿಪಳೂ || ೫ ||
ಶೀಲಗುಣಸಚ್ಚರಿತೆ ಯುಕ್ತಳು ನಾಡಜೋತಿಯ ಮೆರೆವಳು ಸ್ವಾಮಿ |
ನಾಡಜೋತಿಯ ಮೆರೆವಳು ||
ಶೂಳಿಯ ದಯದಿಂದೆ ಗಾಂಧಿಯವಾಮ ತೊಡೆಯಲಿ ಮೆರೆದಳು ಸ್ವಾಮಿ |
ವಾಮತೊಡೆಯಲಿ ಮೆರೆದಳು || ೬ ||
ಸಾಧುಸಂತರ ರಾಷ್ಟ್ರಪುರುಷರ ಮಾತಯೆನಿಪಳು ಪೆಣ್ಮಣಿ ಸ್ವಾಮಿ |
ಮಾತೆಯೆನಿಪಳು ಪೆಣ್ಮಣಿ ||
ಸಾಧುದಂಪತಿ ದುಡಿದುತಂದರು ಸ್ವಾತಂತ್ರ ಲಕುಮಿಯ ನಾಡಿಗೆ ಸ್ವಾಮಿ|
ಸ್ಥಾತಂತ್ರ ಲಕುಮಿಯ ನಾಡಿಗೆ || ೭ ||
ಕಸ್ತೂರಿಮಾತೆಯ ಪಥದಿ ನಡೆಯುತೆ ಕಸ್ತೂರಿ ಪರಿಮೆಳ ಬೀರಿರಿ ಸ್ವಾಮಿ |
ಕಸ್ತೂರಿ ಪರಿಮಳ ಬೀರಿರಿ ||
ವಿಸ್ತಾರಪಡೆಯುತೆ ನಿಮ್ಮ ತೇಜವು ಜಗಕೆ ಶಾಂತಿಯನೀಯಲಿ ಸ್ವಾಮಿ |
ಜಗಕೆ ಶಾಂತಿಯನೀಯಲಿ || ೮ ||
“ಎಲ್ಲ ಜನಗಳು ಸುಖಿಗಳಾಗಲಿ ಎಲ್ಲರೊಳು ಆರೋಗ್ಯ ನೆಲಿಸಲಿ
ಎಲ್ಲಕಡೆ ಶುಭಶಾಂತಿ ಹಬ್ಬಲಿ ದೂರಿ ದುಃಖಗಳ”
ಓಂ ನಮೋ ನಾರಾಯಣಾಯ|
*****















