ಹೂವೇ ಹೂವೇ ಕಾಮನ-ಬಿಲ್ಲೇ
ಬನ್ನಿರಿ ಆಡೋಣ
ಕುಣಿಯುವ ಈ ನಮ್ಮಂಗಳದಲ್ಲೆ
ಹಗರಣ ಮಾಡೋಣ
ಬಾಬಾ ಹಕ್ಕಿ ಇದೆ ಅವಲಕ್ಕಿ
ಒಣ ಕೊಬ್ಬರಿ ಬೆಲ್ಲ
ಬನ್ನಿ ಬನ್ನಿ ಥೈ ಥೈ ಅನ್ನಿ
ನಲಿಯುವ ನಾವೆಲ್ಲಾ
ಹೂವು ಹಕ್ಕಿ ಕಾಮನ ಬಿಲ್ಲು
ಕಾಣಿಸದಾದವು ನನಗೆಲ್ಲೆಲ್ಲೂ
ಆದವು ಅವು ಗಪ್ಪ
ಕಿವಿಯಲಿ ಯಾರೋ
ಅಂದರು ಮೆಲ್ಲಗೆ-
“ಹೆದರಿಕೆ ಹೂವಿಗೆ
ಕಾಮನ ಬಿಲ್ಲಿಗೆ
ಇರುವನು ನಿನ್ನಪ್ಪ
ಮನೆಯಲ್ಲಿ
ಮಗುವೇ ನಿನ್ನಪ್ಪ!”
*****

















