ಒಂದು ಕವನಕಿನ್ನೊಂದು ಕವನಕುಂ ತರ್ಕ
ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ
ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು
ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ
ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು – ವಿಜ್ಞಾನೇಶ್ವರಾ
*****