ಸುಡಲಿ ಹೆಣ್ಣಿನ ಜಲುಮ | ಹೆರವರ ಕೈಯಲಿ ಸಣ್ಣ ||ಪ|| ಹಡದವ್ವ ಹಡದಪ್ಪ, ಹಡದೇನು ಸುಡಬೇಕ ಹಡೆದು ಹೆರವರಿಗೆ ಕೊಡಬೇಕ | ಸು | ಕಣ್ಣೀರು ತಡೆದ ಮಳೆಯಾಗಿ ಸುರಿದಾವ || ೧ ಬೀಸಿ ಹಾಡುನ ಬಾರ, ಕಾಸು ಜಿಪುಣನ ಹಾಡ- ಗಾಸ್ಯಾಕ ಬಾಳು ಜನುಮಕ | ಜಗದಾಗ ಸೋಸಿ ನೆಡದಾರ ಸಂಸಾರ || ೨ ಪುಲಿಕೇಶಿ ದೊರೆಯಾಳಿ, ಕಲಕೆಲ್ಲ ತಿಳಿ...

ಕಟ್ಟುವೆವು ನಾವು ಬಾಹ್ಯ ಬಲು ಸುಂದರ ಮನೆಗಳ ಸಾವಿರವರುಷ ಬದುಕುವವೆಂಬ ಭ್ರಮೆಯಲಿ| ಕಲ್ಲು, ಕಬ್ಬಿಣ ಸಿಮೆಂಟಲಿ ತ್ಯಾಗ ಹೊನ್ನೆ ಬೀಟೆಮರದ ಬಾಗಿಲಲಿ|| ಬಹು ಅಂತಸ್ತಿನ ಮನೆ ಬಾರೀ ಬೆಲೆಬಾಳುವ ಮನೆ| ವೈಕುಂಠದಂತಹ ಬಾಗಿಲು ಹತ್ತು ಕೊಠಡಿಯ ನೂರಾರು ಚದು...

“ಮರ! ಭೂಮಿಯಿಂದ ನೀನೇನ ಕಲಿತೆ?” ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್...

ಮೊಳಕೆಯೊಡೆದು ಮೇಲೇರುವ ತವಕ ಚಿಗುರಾಗಿ ಗಿಡವಾಗಿ ಮೈನೆರೆದ ಮರವಾಗಿ ಮುತ್ತೈದೆಯಾಗಿ ಅದಕ್ಕೆ ಮಗುವಾಗಿ ಮಗುಬಿಳಲು ಮತ್ತೆ ಬೇರಾಗಿ ಬೆಳೆದು ಮರವಾಗಿ ಮತ್ತೆ ಬಿಳಲು ಟಿಸಿಲು ಬೇರು ಒಂದೇಸಮನೆ ಕಾರುಬಾರು ನಡೆಸುವ ದೈತ್ಯ ಆಲ. *****...

ಮೂರು ಧರ್ಮಗಳ ಸಮನ್ವಯ ತತ್ವವು ವಸಾಹತು ಪೂರ್ವದ ಕನ್ನಡ ಕಾವ್ಯವನ್ನು ರೂಪಿಸಿದೆ. ಮತ ಮೂಲದ ಸಾಂಸ್ಥಿಕ ಧರ್ಮ, ಕಾವ್ಯಧರ್ಮ, ನೆಲದ ಬಗೆಗಿನ ಬದ್ಧತೆಯ ಧರ್ಮಗಳು ಕನ್ನಡ ಕವಿಗಳನ್ನು ವಿಶಿಷ್ಟವಾಗಿ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಧರ್ಮ, ಕಾವ್ಯ ಮತ್ತು...

ಕಳೆಯನು ಕಳೆಯದೆ ನಾನಿನ್ನ ಕಾಣೆನು ಸರಸಮ್ಮ ನೀನೆಷ್ಟು ಕಳವಂತಿಯೆ ಹೊಲದಲ್ಲಿ ತುಂಬಿರುವ ದನಗಳನಟ್ಟದೆ ಬೆಳೆಯನ್ನು ಕಾಣೆನು ರಸವಂತಿಯೆ || ೧ || ಈ ಮಣ್ಣು ಈ ನೀರು ಗಾಳಿ ಬೆಂಕಿಗಳಿಂದ ಹೊಲದಲ್ಲಿ ಬೆಳೆಯನು ಬೆಳೆಯಬಹುದು ಬರಿಸೊಪ್ಪೆ ಬೆಳೆದರೆ ಹೊಟ್ಟಿ...

ಎಲೆಲೆ ತಿಗಣಿಯೆ ನಿಲ್ಲು ಕೆಲವು ಪ್ರೆಶ್ನೆಗಳನ್ನು ಕೇಳುತ್ತೇನೆ : ಉತ್ತರಿಸಿ ಹೋಗು ನನ್ನ ಬಿಸಿ ನೆತ್ತರನು ಕುಡಿದ ನಿನಗೆ ಕೇಳುವ ಹಕ್ಕು ಇದೆಯೋ ನನಗೆ ಇಲ್ಲವೋ ಡನ್ ಎಂಬ ಕವಿಯೊಬ್ಬನಿದ್ದ ಸೊಳ್ಳೆ ಹೀರಿದ ನೆತ್ತರಲ್ಲಿ ಅವನಿಗಾಯಿತಂತೆ ಪ್ರಿಯೆಯ ಸಂಯ...

ಬಹಳ ಜನರ ತಲೆಗೂದಲಿನಲಿ ಹೇನು ಕೂರಿಗಳು ಹುಟ್ಟಿಕೊಂಡು ತಲೆಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತವೆ. ಸದಾ ಕೆರೆಯುತ್ತಲೇ ಇರಬೇಕೆನಿಸುತ್ತದೆ. ಒಂದೊಂದು ಸಲ ಸಭ್ಯ ಗೃಹಸ್ಥರ ತಲೆಯಲ್ಲಿ ಹೀಗಾದಾಗ ಮರ್ಯಾದೆ ಹೋಗುವ ಸಂಭವ ಇರುತ್ತದೆ. ಇದು ಒಬ್ಬರ ತಲೆಯಿ...

ಮಂಗಳಕರ ದಿನದಾಗಮನದ ಘೋಷಣೆಯಾಗಿ ಕತ್ತಲೆ ಚಾಪೆಯ ಸುತ್ತುತಿದೆ ಬಾನಿನ ಕಣ್ಣುಗಳು ಮಂಕಾಗುತಿವೆ ಭೂಮಿಯ ಕಣ್ಣುಗಳು ತೆರೆಯುತಿವೆ ಹಕ್ಕಿಗಳು ಕಲರವ ಎಬ್ಬಿಸಿವೆ ಪ್ರಕೃತಿ ಮಾತೆಯ ನಿತ್ಯದ ಸೂಚನೆಯಾಗಿ. ನಂಬಿಕೆ, ಶ್ರದ್ಧಾ ಮನೆ ಮಂದಿರಗಳಲಿ ಮೊಳಗುತಿವೆ ಶ...

ನೀ ಬರುವ ದಾರಿಯಲಿ ಅರಳಿವೆ ಹೂಗಳು ಗಾಳಿ ಬೀಸಿವೆ ಚಿಗುರೆಲೆಗಳು ನೆರಳು ನೀಡಿವೆ ಗಿಡ ಮರಗಳು ನೀ ಬರುವ ದಾರಿಯಲಿ ಹಾಡಿವೆ ಹಕ್ಕಿಗಳು ಕುಣಿದಿವೆ ನವಿಲುಗಳು ಬೆರಗಾಗಿ ನೋಡಿವೆ ಜಿಂಕೆ ಸಾರಂಗಗಳು ನೀ ಬರುವ ದಾರಿಯಲಿ ನೆರಳಾಗಿದೆ ಚಿತ್ತಾರ ನೆಲವಾಗಿದೆ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...