ಬಹಳ ಜನರ ತಲೆಗೂದಲಿನಲಿ ಹೇನು ಕೂರಿಗಳು ಹುಟ್ಟಿಕೊಂಡು ತಲೆಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತವೆ. ಸದಾ ಕೆರೆಯುತ್ತಲೇ ಇರಬೇಕೆನಿಸುತ್ತದೆ. ಒಂದೊಂದು ಸಲ ಸಭ್ಯ ಗೃಹಸ್ಥರ ತಲೆಯಲ್ಲಿ ಹೀಗಾದಾಗ ಮರ್ಯಾದೆ ಹೋಗುವ ಸಂಭವ ಇರುತ್ತದೆ. ಇದು ಒಬ್ಬರ ತಲೆಯಿಂದ ಇನ್ನೊಬ್ಬರಿಗೆ ಹತ್ತುತ್ತದೆ, ಎಂಬುವುದು ಸತ್ಯ. ಇಂಥಹ ಸಂದರ್ಭದಲ್ಲಿ ವಿವಿಧ ಬಾಚುಣೆಗೆಗಳನ್ನು ಎಣ್ಣೆ, ಸೀಗೆಪುಡಿಯನ್ನು ಬಳಸಿದರೂ ನಾಶಲಾಗುವುದೇ ಇಲ್ಲ ಇಂಥಹ ಹೇನುಗಳ ನಾಶಕ್ಕಾಗಿ ಎನೆಲ್ಲ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಇಸ್ರೇಲಿನಲ್ಲಿ ವಿದ್ಯುತ್ ಚಾಲಿತ ಹಣಿಗೆಯೊಂದನ್ನು ಕಂಡು ಹಿಡಿಯಲಾಗಿದೆ. ಇದನ್ನು ಉಪಯೋಗಿಸುವುದರಿಂದ ತಲೆಯಲ್ಲಿರುವ ಹೇನುಗಳು ನಾಶವಾಗುತ್ತವೆ.
ಈ ಹಣಿಗೆಯಲ್ಲಿ ಅತಿ ಚಿಕ್ಕ ಎಲೆಕ್ಟ್ರಾನಿಕ್ ಯಂತ್ರವನ್ನು ಅವಳಡಿಸಲಾಗಿದೆ. ಹಣಿಗೆಯು ತಲೆಯನ್ನು ಮುಟ್ಟಿದೊಡನೆ ಸೌಮ್ಯವಾದ ವಿದ್ಯುತ್ ಪ್ರವಹಿಸುತ್ತದೆ. ಆ ವಿದ್ಯುತ್ ವಾಹಕಗಳು ತಲೆಯ ಚರ್ಮಕ್ಕೆ, ಕೂದಲಿಗೆ ಹಾನಿ ಮಾಡದೇ ಕೂದಲುಗಳ ಸಂದುಗಳಲ್ಲಿರುವ ಹೇನುಗಳನ್ನು ಮಾತ್ರ ಕೊಲ್ಲುತ್ತದೆ, ನಂತರ ಅದರ ಶಾಕಿನಿಂದ ಅಲ್ಲಿಯೇ ಸತ್ತು ಹಣಿಗೆಯಿಂದ ಹೋರಬರುತ್ತವೆ.
*****